ಬಾಗಲಕೋಟೆಯ ಕಲಾದಗಿಯಲ್ಲಿ ಬಿರುಗಾಳಿ ಸಮೇತ ಭಾರೀ ಮಳೆ, ಸನ್ನಿವೇಶ ಆನಂದಿಸಿದ ಶಾಲಾಮಕ್ಕಳು!

|

Updated on: Aug 16, 2024 | 11:29 AM

ಜೂನ್ ಮಧ್ಯಭಾಗದಿಂದ ರಾಜ್ಯದೆಲ್ಲೆಡೆ ಸುರಿಯಲಾರಂಭಿಸಿದ ಮಳೆ ಆಗಸ್ಟ್ ಮೊದಲವಾರದವರೆಗೆ ಸೃಷ್ಟಿಸಿದ ಅವಾಂತರಗಳನ್ನು ನಾವು ವರದಿ ಮಾಡಿದ್ದೇವೆ. ಆದರೆ, ಸುಮಾರು 10ದಿನಗಳಿಂದ ಮಳೆಯ ಭರಾಟೆ ತಗ್ಗಿತ್ತು. ಆಗಸ್ಟ್ 15 ರ ನಂತರ ಮತ್ತೇ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ, ಜನ ಮಳೆಯನ್ನು ನಿರೀಕ್ಷಿಸುತ್ತಿದ್ದಾರೆ.

ಬಾಗಲಕೋಟೆ: ಬಿರುಗಾಳಿ ಸಮೇತ ಭಾರೀ ಮಳೆ ಅಂತ ನಾವು ರೆಡಿಯೋ, ಟಿವಿಗಳಲ್ಲಿಅಅಅಅಅ ಹೇಳುವುದನ್ನು ಕೇಳಿದ್ದೇವೆಯೇ ಹೊರತು ನೋಡಿದ್ದು ಅಪರೂಪ. ಇಲ್ನೋಡಿ, ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಬಿರುಗಾಳಿಯಂತೆ ಗಾಳಿ ಬೀಸುತ್ತಿದೆ ಮತ್ತು ಮಳೆ ಸಹ ಧೋ ಅಂತ ಸುರಿಯುತ್ತಿದೆ. ಕಲಾದಗಿಯಲ್ಲಿರುವ ಒಂದು ಶಾಲೆಯೊಂದರಿಂದ ಈ ದೃಶ್ಯವನ್ನು ಸೆರೆಹಿಡಿಲಾಗಿದೆ. ಅಲ್ಲಿನ ಮಕ್ಕಳು ಈ ಭಯಾನಕ ದೃಶ್ಯವನ್ನು ಆನಂದಿಸುತ್ತಿದ್ದಾರೆ. ಗಾಳಿಯ ರಭಸ ಗಮನಿಸಿ ಮಾರಾಯ್ರೇ. ಶಾಲೆಯ ಮರಗಳು ನೆಲಕ್ಕುರಳಲಿವೆಯೋ ಅಂತ ಭಾಸವಾಗುತ್ತದೆ. ಪ್ರಸಕ್ತ ಮಾನ್ಸೂನ್ ಸೀಸನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾದರೂ ಬಾಗಲಕೋಟೆ ಜಿಲ್ಲೆ ಇದಕ್ಕೆ ಅಪವಾದವಾಗಿತ್ತು. ಕೊರತೆ ಮಳೆಯಾಗಿದೆ ಅಂತ ರೈತ ಸಮುದಾಯದ ಜನ ಹೇಳುತ್ತಿದ್ದರು. ಆದರೆ ಇಂದಿನಿಂದ ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಲಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮತ್ತು ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಕಲಾದಗಿಯಲ್ಲಿ ಸುರಿದ ಮಳೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಗೆ ಪೂರಕವಾಗಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಭಾರಿ ಮುಂಗಾರು ಮಳೆ ಮಧ್ಯೆಯೂ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ!