ಯತ್ನಾಳ್ ರಿಂದ ಭ್ರಷ್ಟಾಚಾರದ ಆರೋಪಕ್ಕೊಳಗಾಗಿದ್ದ ಡಾ ಸುಧಾಕರ್​ಗೆ ಟಿಕೆಟ್ ಸಿಕ್ಕಿದ್ದು ಪ್ರಜಾಪ್ರಭುತ್ವದ ಅಂತ್ಯಕ್ಕೆ ಮುನ್ನುಡಿ ಬರೆದಂತಿದೆ: ಪ್ರದೀಪ್ ಈಶ್ವರ್

|

Updated on: Mar 25, 2024 | 2:40 PM

ಸುಧಾಕರ್ ಅವರಿಗೆ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವದ ಅವಸಾನಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಿದ ಪ್ರದೀಪ್ ಕೋವಿಡ್ ಸಮಯದಲ್ಲಿ ಸುಧಾಕರ್ ಅವರಿಂದ ರೂ 2,2000 ಕೋಟಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಮ್ಮ ಸರ್ಕಾರ ಆರೋಪಿಸಿದ್ದು ಒಂದೆಡೆಯಾದರೆ, ಅವರ ಪಕ್ಷದವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಧಾಕರ್ ವಿರುದ್ಧ 40,000 ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರು ಎಂದು ಪ್ರದೀಪ್ ಹೇಳಿದರು.

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಕೆ ಸುಧಾಕರ್ (Dr K Sudhakar) ಅವರಿಗೆ ಸಿಕ್ಕೊಡನೆ ಅಲ್ಲಿನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಪ್ರತಿಕ್ರಿಯೆ ನೀಡುವುದನ್ನು ಕನ್ನಡಿಗರೆಲ್ಲ ನಿರೀಕ್ಷಿಸಿದ್ದರು. ಪ್ರದೀಪ್, ಚಿಕ್ಕಬಳ್ಳಾಪುರದಲ್ಲಿ ಮಧ್ಯಮದವರೊಂದಿಗೆ ಮಾತಾಡದೆ, ಬೆಂಳೂರಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ (KPCC office) ಸುದ್ದಿಗೋಷ್ಟಿ ನಡೆಸಿ ಮಾತಾಡಿದರು. ಸುಧಾಕರ್ ಅವರಿಗೆ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವದ ಅವಸಾನಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಿದ ಪ್ರದೀಪ್ ಕೋವಿಡ್ ಸಮಯದಲ್ಲಿ ಸುಧಾಕರ್ ಅವರಿಂದ ರೂ 2,2000 ಕೋಟಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಮ್ಮ ಸರ್ಕಾರ ಆರೋಪಿಸಿದ್ದು ಒಂದೆಡೆಯಾದರೆ, ಅವರ ಪಕ್ಷದವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಧಾಕರ್ ವಿರುದ್ಧ 40,000 ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರು ಎಂದು ಪ್ರದೀಪ್ ಹೇಳಿದರು.

ಅಷ್ಟು ದೊಡ್ಡ ಪ್ರಮಾಣದ ಆರೋಪ ಎದುರಿಸುತ್ತಿದ್ದ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನಂಥ ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧ ಸೋಲು ಅನುಭವಿಸಿದ ವ್ಯಕ್ತಿಗೆ ಟಿಕೆಟ್ ನೀಡಿರುವುದು ತನ್ನಲ್ಲಿ ಸೋಜಿಗವುಂಟು ಮಾಡಿದೆ ಎಂದ ಪ್ರದೀಪ್ ಟಿಕೆಟ್ ಸಿಗಲು ಕಾರಣವಾದ ಅಂಶಗಳು ಯಾವವು ಅಂತ ವಿಶ್ಲೇಷಿಸಿದರು. ಟಿಕೆಟ್ ಗಿಟ್ಟಿಸಲು ಸುಧಾಕರ್ ರಾಜ್ಯದ ಕೆಲ ಬಿಜೆಪಿ ನಾಯಕರಿಗೆ ಸೂರ್ಯ ನಮಸ್ಕಾರ, ದೀರ್ಘದಂಡ ನಮಸ್ಕಾರಗಳನ್ನು ಮಾಡಿದ್ದಾರೆ ಎಂದು ಒಗಟಿನಲ್ಲಿ ಮಾತಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಅಭಿವೃಧ್ಧಿ ಕಾರ್ಯಗಳನ್ನು ಲೋಕಸಭಾ ಕ್ಷೇತ್ರಕ್ಕೂ ವಿಸ್ತರಿಸುವೆ: ಡಾ ಕೆ ಸುಧಾಕರ್