AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradeep Eshwar Press Meet: ಡಾ. ಸುಧಾಕರ್​ಗೆ ವಿರುದ್ಧ ಪ್ರದೀಪ್​ ಈಶ್ವರ್​ ಕೆಂಡಾಮಂಡಲ

Pradeep Eshwar Press Meet: ಡಾ. ಸುಧಾಕರ್​ಗೆ ವಿರುದ್ಧ ಪ್ರದೀಪ್​ ಈಶ್ವರ್​ ಕೆಂಡಾಮಂಡಲ

TV9 Web
| Updated By: ಆಯೇಷಾ ಬಾನು|

Updated on:Mar 25, 2024 | 1:47 PM

Share

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್​ ಈಶ್ವರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಡಾ.ಕೆ.ಸುಧಾಕರ್​​ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಪಾರ್ಲಿಮೆಂಟ್ ಹೋಗುವುದಕ್ಕೆ ಸುಧಾಕರ್​​ಗೆ ಬಿಡಲ್ಲ. ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಲ್ಲಲಿ ಎಂದು ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್.25: ಮಾಜಿ ಸಚಿವ ಡಾ.ಕೆ.ಸುಧಾಕರ್​​ಗೆ (Dr.k.Sudhakar) ಬಿಜೆಪಿ ಲೋಕಸಭಾ ಟಿಕೆಟ್​ ನೀಡಿದ್ದಕ್ಕೆ ಪ್ರದೀಪ್​ ಈಶ್ವರ್ (Pradeep Eshwar) ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪಾರ್ಲಿಮೆಂಟ್ ಪವಿತ್ರ ಜಾಗ, ಪಾರ್ಲಿಮೆಂಟ್ ಹೋಗುವುದಕ್ಕೆ ಸುಧಾಕರ್​​ಗೆ ಬಿಡಲ್ಲ. ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಲ್ಲಲಿ. ಆದ್ರೆ, ಸಂಸತ್​ ಪ್ರವೇಶಿಸಲು ಸುಧಾಕರ್​ಗೆ ಬಿಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ‘ಕೈ’​ ಶಾಸಕ ಪ್ರದೀಪ್​ ಈಶ್ವರ್​ ಸವಾಲು ಹಾಕಿದ್ದಾರೆ.

ಸುಧಾಕರ್ ಟಾರ್ಚರ್ ನಿಂದಲೇ ನಾನು ಶಾಸಕನಾಗಿದ್ದೇನೆ. ಸುಧಾಕರ್ ಕಾಂಗ್ರೆಸ್ ಗೆ ಥ್ರೆಟ್ ಅಲ್ಲ. ಬಿಜೆಪಿಗೆ ಥ್ರೆಟ್. ಕೋವಿಡ್ ಹಗರಣದ ಎಲ್ಲ ತನಿಖೆ ಆಳವಾಗಿ ನಡೆಯುತ್ತಿದೆ. ಒಂದು ಮಾಸ್ಕ್ 450ರೂ.ಗೆ ಖರೀದಿ ಮಾಡಿ ಹಗರಣ ಮಾಡಿದ್ದಾರೆ. ಅವರದೇ ಶಾಸಕ ವಿಶ್ವನಾಥ್ ಸುಧಾಕರ್ ಪರ ಕೆಲಸ ಮಾಡಲ್ಲ ಅಂದಿದ್ದಾರೆ. ಐಟಿ ಇಡಿ ಬಿಟ್ಟು ಕಾಟ ಕೊಡ್ತೀರಾ ಸುಧಾಕರ್ ಅವರೇ ನಾನು ರೆಡಿ ಇದ್ದೀನಿ. ಡಾ.ಕೆ ಸುಧಾಕರ್​ಗೆ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ. ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡ್ತಾರೆ. ಸುಧಾಕರ್ ನಾಳೆ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯಾವುದೇ ಹಗರಣ ಮಾಡಿಲ್ಲ ಅಂತ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Mar 25, 2024 01:28 PM