ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಅದು ದಕ್ಕುತ್ತದೆ: ಸಿಟಿ ರವಿ, ಮಾಜಿ ಶಾಸಕ

|

Updated on: Sep 16, 2023 | 7:21 PM

ಸುಳ್ಯದಲ್ಲಿ ಭಾಗೀರತಿ ಅನ್ನುವವರಿಗೆ ಟಿಕೆಟ್ ಸಿಕ್ಕಿತ್ತು, ಟಿಕೆಟ್ ಪಡೆಯುವಾಗ ಅವರ ಖಾತೆಯಲ್ಲಿ ಕೆಲವೇ ಸಾವಿರಗಳಷ್ಟು ಹಣವಿತ್ತು. ಮೋಸ ಮಾಡುವವರು ಗೊವಿಂದ ಬಾಬು ಪೂಜಾರಿಯಂಥ ಬಲಿ ಕಾ ಬಕ್ರಾಗಳಿಗಾಗಿ ಕಾಯುತ್ತಿರುತ್ತಾರೆ. ಅವರಂಥ ಅಮಾಯಕರು ಸುಲಭವಾಗಿ ಖೆಡ್ಡಾಗೆ ಬೀಳುತ್ತಾರೆ ಎಂದು ರವಿ ಹೇಳಿದರು.

ಉಡುಪಿ: ಬಿಜೆಪಿಯಲ್ಲಿ ದುಡ್ಡು ಕೊಟ್ರೆ ಟಿಕೆಟ್ ಸಿಗುತ್ತದೆ ಅಂತ ಭಾವಿಸೋದು ತಪ್ಪು, ನಮ್ಮ ಪಕ್ಷದಲ್ಲಿ ಟಿಕೆಟ್ ಗಳು ಮಾರಾಟದ ಸರಕಲ್ಲ, ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುವವರಿಗೆ ಮಾತ್ರ ಟಿಕೆಟ್ ಸಿಗುತ್ತದೆ, ಟಿಕೆಟ್ ಮಾರಾಟಕ್ಕಿದೆ ಅಂತ ಹೇಳಿ ಯಾರಾದರೂ ನಂಬಿಸುವ ಪ್ರಯತ್ನ ಮಾಡಿದರೆ ನಂಬಿ ಮೋಸಹೋಗಬೇಡಿ ಅಂತ ಮಾಧ್ಯಮಗಳ ಮೂಲಕ ಹೇಳಬಯಸುತ್ತೇನೆ ಅಂತ ಮಾಜಿ ಶಾಸಕ ಸಿಟಿ ರವಿ (CT Ravi) ಹೇಳಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರವಿ, ತಮ್ಮ ಪಕ್ಷದಲ್ಲಿ ಟಿಕೆಟ್ ಮಾರಾಟವಾಗುತ್ತವೆ ಅನ್ನೋದೇ ನಿಜವಾಗಿದ್ದರೆ ಬೈಂದೂರು ವಿಧಾನ ಸಭಾ ಕ್ಷೇತ್ರದಿಂದ (Byndoor) ಗೋವಿಂದ ಬಾಬು ಪೂಜಾರಿಗೆ (Govind Babu Pujari) ಟಿಕೆಟ್ ಸಿಗುತ್ತಿತ್ತು. ಅದರೆ ಸಿಕ್ಕಿದ್ದು, ಬೇರೆಯವರಿಗೆ. ಹಾಗೆಯೇ, ಸುಳ್ಯದಲ್ಲಿ ಭಾಗೀರತಿ (Bhagirathi) ಅನ್ನುವವರಿಗೆ ಟಿಕೆಟ್ ಸಿಕ್ಕಿತ್ತು, ಟಿಕೆಟ್ ಪಡೆಯುವಾಗ ಅವರ ಖಾತೆಯಲ್ಲಿ ಕೆಲವೇ ಸಾವಿರಗಳಷ್ಟು ಹಣವಿತ್ತು. ಮೋಸ ಮಾಡುವವರು ಗೊವಿಂದ ಬಾಬು ಪೂಜಾರಿಯಂಥ ಬಲಿ ಕಾ ಬಕ್ರಾಗಳಿಗಾಗಿ ಕಾಯುತ್ತಿರುತ್ತಾರೆ. ಅವರಂಥ ಅಮಾಯಕರು ಸುಲಭವಾಗಿ ಖೆಡ್ಡಾಗೆ ಬೀಳುತ್ತಾರೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ