ಸುಳ್ಳು ಸ್ವಾಮಿ ಪ್ರಣವಾನಂದ್​ಗೆ ಬಿಟ್ಟಿ ಪ್ರಚಾರ ನೀಡಲು ನಾನು ತಯಾರಿಲ್ಲ: ಮಧು ಬಂಗಾರಪ್ಪ, ಸಚಿವ

ಅಸಲಿಗೆ, ಈ ಸ್ವಾಮಿಯ ಹಿನ್ನೆಲೆ ಏನು ಅಂತ ಪತ್ತೆ ಮಾಡಿ, ಅವರು ಬಂದಿದ್ದು ಎಲ್ಲಿಂದ, ಸಾರ್ವಜನಿಕವಾಗಿ ಕಣ್ಣೀರು ಹಾಕೋದು ಯಾಕೆ ಮೊದಲಾದ ಸಂಗತಿಗಳನ್ನು ಪತ್ತೆ ಹಚ್ಚಿ ಅಂತ ಸಚಿವ ಹೇಳಿದರು. ಧರ್ಮದ ಹೆಸರಲ್ಲಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುವ ಇಂಥವರಿಗೆಲ್ಲ ಫುಟೇಜ್ ನೀಡಬೇಡಿ, ತನ್ನೊಂದಿಗೆ ನಡೆಸಿರುವ ಈ ಮಾತುಕತೆಯನ್ನೂ ದಯವಿಟ್ಟು ಪ್ರಸಾರ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದರು.

|

Updated on: Sep 16, 2023 | 5:52 PM

ಶಿವಮೊಗ್ಗ: ಮಧು ಬಂಗಾರಪ್ಪ (Madhu Bangarappa) ಅವರಿಂದ ನನಗೆ ಜೀವ ಬೆದರಿಕೆ ಇದೆ ಅಂತ ಪ್ರಣವಾನಂದ ಸ್ವಾಮೀಜಿ (Pranavananda Swamiji) ಆರೋಪಿಸಿದರೆ, ಅವರೊಬ್ಬ ಸುಳ್ಳು ಸ್ವಾಮಿ, ಅವರ ಬಗ್ಗೆ ಪ್ರಶ್ನೆ ಕೇಳಿ ದಯವಿಟ್ಟು ನನ್ನ ಸಮಯ ಹಾಳು ಮಾಡಬೇಡಿ, ಸ್ವಾಮಿಗೆ ಬಿಟ್ಟಿ ಪ್ರಚಾರ ನೀಡಲು ನಾನು ತಯಾರಿಲ್ಲ, ಮಾಡಲು ನನಗೆ ಬೇಕಾದಷ್ಟು ಕೆಲಸವಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಅಸಹನೆಯಿಂದ ಹೇಳುತ್ತಾರೆ. ನಗರದಲ್ಲಿಂದು ಮಾಧ್ಮಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಧು ಬಂಗಾರಪ್ಪ, ತಾನ್ಯಾವತ್ತೂ ಬಿಕೆ ಹರಿಪ್ರಸಾದ ಬಗ್ಗೆ ಮಾತಾಡಿಲ್ಲ, ತಾನು ಈಡಿಗ ಸಮಾಜದವನ್ನು ಅನ್ನೋದಕ್ಕಿಂತ ಹೆಚ್ಚು ಮನುಷ್ಯ ಜಾತಿಗೆ ಸೇರಿದವನು ಅಂತ ಹೇಳಿಕೊಳ್ಳಲು ಇಷ್ಟಪಡುತ್ತೇನೆ ಅಂತ ಹೇಳಿದರು. ಅಸಲಿಗೆ, ಈ ಸ್ವಾಮಿಯ ಹಿನ್ನೆಲೆ ಏನು ಅಂತ ಪತ್ತೆ ಮಾಡಿ, ಅವರು ಬಂದಿದ್ದು ಎಲ್ಲಿಂದ, ಸಾರ್ವಜನಿಕವಾಗಿ ಕಣ್ಣೀರು ಹಾಕೋದು ಯಾಕೆ ಮೊದಲಾದ ಸಂಗತಿಗಳನ್ನು ಪತ್ತೆ ಹಚ್ಚಿ ಅಂತ ಸಚಿವ ಹೇಳಿದರು. ಧರ್ಮದ ಹೆಸರಲ್ಲಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುವ ಇಂಥವರಿಗೆಲ್ಲ ಫುಟೇಜ್ ನೀಡಬೇಡಿ, ತನ್ನೊಂದಿಗೆ ನಡೆಸಿರುವ ಈ ಮಾತುಕತೆಯನ್ನೂ ದಯವಿಟ್ಟು ಪ್ರಸಾರ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಧಾರ್ಮಿಕ ಆಚರಣೆಗೆ ಅಡ್ಡಿ ಮಾಡುವುದನ್ನು ಸರ್ಕಾರ ಸಹಿಸಲ್ಲ: ಸಿದ್ದರಾಮಯ್ಯ
ಧಾರ್ಮಿಕ ಆಚರಣೆಗೆ ಅಡ್ಡಿ ಮಾಡುವುದನ್ನು ಸರ್ಕಾರ ಸಹಿಸಲ್ಲ: ಸಿದ್ದರಾಮಯ್ಯ
ನದಿಯಿಂದ ಹೊರಬಂದ‌ ಮೊಸಳೆ ರೈಲಿಗೆ ಸಿಲುಕಿ ಸಾವು
ನದಿಯಿಂದ ಹೊರಬಂದ‌ ಮೊಸಳೆ ರೈಲಿಗೆ ಸಿಲುಕಿ ಸಾವು
ಶಿವಮೊಗ್ಗದಲ್ಲಿ ಕಲ್ಲು ತೂರಾಟಕ್ಕೆ ಕೇವಲ ಹಿಂದೂ ಮನೆಗಳೇ ಟಾರ್ಗೆಟ್ ಆದವೇ?
ಶಿವಮೊಗ್ಗದಲ್ಲಿ ಕಲ್ಲು ತೂರಾಟಕ್ಕೆ ಕೇವಲ ಹಿಂದೂ ಮನೆಗಳೇ ಟಾರ್ಗೆಟ್ ಆದವೇ?
ಮಲೆ ಮಹದೇಶ್ವರನ ದರ್ಶನ ಪಡೆದ ನಟ ರಾಘವೇಂದ್ರ ರಾಜ್​ಕುಮಾರ್
ಮಲೆ ಮಹದೇಶ್ವರನ ದರ್ಶನ ಪಡೆದ ನಟ ರಾಘವೇಂದ್ರ ರಾಜ್​ಕುಮಾರ್
ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ
‘ಶಿವಣ್ಣ ಬರೀ ಹಾರ್ಡ್ ವರ್ಕರ್ ಅಲ್ಲ’; ಸಂದೇಶ್ ನಾಗರಾಜ್​ ಹೀಗೆ ಹೇಳಿದ್ದೇಕೆ?
‘ಶಿವಣ್ಣ ಬರೀ ಹಾರ್ಡ್ ವರ್ಕರ್ ಅಲ್ಲ’; ಸಂದೇಶ್ ನಾಗರಾಜ್​ ಹೀಗೆ ಹೇಳಿದ್ದೇಕೆ?
'ರಾಜಮಾರ್ತಾಂಡ' ಮತ್ತು ಚಿರು ಬಗ್ಗೆ ಪತ್ನಿ ಮೇಘನಾ ಭಾವುಕ ಮಾತು
'ರಾಜಮಾರ್ತಾಂಡ' ಮತ್ತು ಚಿರು ಬಗ್ಗೆ ಪತ್ನಿ ಮೇಘನಾ ಭಾವುಕ ಮಾತು