ಭಯಾನಕ ಬೇಟೆ: ಹುಲಿ ಬೇಟೆಗೆ ಬಲಿಯಾದ ಜಿಂಕೆ ಮರಿ, ಅಪರೂಪದ ವಿಡಿಯೋ ಇಲ್ಲಿದೆ ನೋಡಿ
ಹುಲಿಯೊಂದು ಜಿಂಕೆ ಮರಿಯನ್ನು ಬೇಟೆಯಾಡಿದ ಅಪರೂಪದ ದೃಶ್ಯ ಹೆಚ್ಡಿ ಕೋಟೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಕಾಣಿಸಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರು, ನೀರು ಕುಡಿಯಲು ಬಂದ ಹುಲಿ, ಜಿಂಕೆ ಮರಿಯನ್ನು ಬೇಟೆಯಾಡಿದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಮೈಸೂರು, ಮಾರ್ಚ್ 6: ಜಿಂಕೆ ಮರಿಯನ್ನು ಹುಲಿಯೊಂದು ಬೇಟೆಯಾಡಿದ ದೃಶ್ಯ ಸಫಾರಿಗೆ ಹೋದವರ ಕ್ಯಾಮರಾದಲ್ಲಿ ಸೆರಯಾಗಿದೆ. ಮೈಸೂರು ಜಿಲ್ಲೆ ಹೆಚ್ಡಿ ಕೋಟೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಹುಲಿ ಬೇಟೆಯ ಅಪರೂಪದ ದೃಶ್ಯ ಕಾಣಿಸಿದೆ. ನೀರು ಕುಡಿಯಲು ಕೆರೆಯ ಬಳಿಗೆ ಹುಲಿ ಬಂದ ವೇಳೆ, ಆಗಷ್ಟೇ ನೀರು ಕುಡಿದು ದಡದಲ್ಲಿ ನಿಂತಿದ್ದ ಜಿಂಕೆ ಮರಿ ಕಾಣಿಸಿದೆ. ಕ್ಷಣಾರ್ಧದಲ್ಲಿ ಜಿಂಕೆ ಮರಿಯನ್ನು ಹುಲಿ ಬೇಟೆಯಾಡಿದೆ. ಸಾಮಾನ್ಯವಾಗಿ, ಹುಲಿಗಳು ಬೇಟೆಯಾಡುವ ದೃಶ್ಯ ಸಿಗುವುದು ಅಪರೂಪದಲ್ಲಿ ಅಪರೂಪ ಎನ್ನಲಾಗಿದೆ.
Published on: Mar 06, 2025 09:36 AM