ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು
ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಾದರೆ ಸಹಜವಾಗಿಯೇ ವನ್ಯಜೀವಿಗಳು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಲಗ್ಗೆಯಿಡುತ್ತವೆ. ಮಾನವ-ವನ್ಯಜೀವಿಗಳ ನಡುವೆ ಸಂಘರ್ಷದಂಥ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗರಹೊಳೆ ಅಭಯಾರಣ್ಯದಲ್ಲಿರುವ ಕೆರೆಕುಂಟೆಗಳಿಗೆ ನೀರನ್ನು ಟ್ಯಾಂಕರ್ ಮೂಲಕ ತುಂಬಿಸುತ್ತಿದ್ದಾರೆ. ಇದಿನ್ನೂ ಬೇಸಿಗೆಯ ಆರಂಭ ಮಾತ್ರ!
ಮೈಸೂರು, ಮಾರ್ಚ್ 6: ಈ ಸಲ ಸುರಿದಿದ್ದು ಭಾರೀ ಮಳೆ, ಬತ್ತಿದ್ದ ಜಲಾಶಯಗಳೆಲ್ಲ ತುಂಬಿ ತುಳುಕಿದವು, ಹೊಳೆಗಳಲ್ಲಿ ಪ್ರವಾಹದಂತೆ ಹರಿದ ನೀರು, ಕೆರೆಕುಂಟೆಗಳಲ್ಲಿ ಕಂಠಮಟ್ಟ ನೀರು-ಹೌದು ತಾನೇ? ಆದರೆ, ನಾಗರಹೊಳೆ ಅಭಯಾರಣ್ಯದ (Nagarahole Forest Reserve) ಸ್ಥಿತಿ ನೋಡಿ ಹೇಗಿದೆ. ನಮ್ಮ ಮೈಸೂರು ವರದಿಗಾರ ಹೇಳುವ ಪ್ರಕಾರ ಅರಣ್ಯಪ್ರದೇಶದಲ್ಲಿರುವ ಸುಮಾರು 250 ಕೆರೆಕುಂಟೆಗಳು ಬತ್ತಿಹೋಗಿರುವ ಕಾರಣ ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನೀರು ಅರಸಿಕೊಂಡು ಪ್ರಾಣಿಗಳು ಮಾನವ-ವಾಸ ಪ್ರದೇಶಗಳಿಗೆ ಹೋಗಬಾರದೆನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯು ಟ್ಯಾಂಕರ್ಗಳ ಮೂಲಕ ಕೆರೆಕುಂಟೆಗಳನ್ನು ತುಂಬಿಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ