ನಾಗರಹೊಳೆ ಅಭಯಾರಣ್ಯಕ್ಕೆ ಬಂತು ಜೀವ ಕಳೆ, ಪ್ರಾಣಿಗಳ ಬಿಂದಾಸ್ ಓಡಾಟ ವಿಡಿಯೋ ನೋಡಿ
ಉತ್ತಮ ಮಳೆಯಿಂದಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಂತು ಜೀವ ಕಳೆ ಬಂದಿದ್ದು, ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳ ಕಲರವ ಮತ್ತೆ ಎಂದಿನಂತೆ ಶುರುವಾಗಿದೆ. ಮಳೆಯಾಗಿದ್ದರಿಂದ ಕಬಿನಿ ಹಿನ್ನೀರಿನಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗಿದೆ.
ಮೈಸೂರು, (ಮೇ 12): ದಾಖಲೆಯ ಬಿಸಿಲಿಗೆ ಬೇಸತ್ತು ಹೋಗಿದ್ದ ಜನಕ್ಕೆ ಇದೀಗ ವರುಣ ಕೂಲ್ ಕೂಲ್ ಮಾಡುತ್ತಿದ್ದಾನೆ. ಇಷ್ಟು ದಿನ ಬಿಸಿಲಿನ ಝಳಕ್ಕೆ ಬೆಂದು ಹೋಗಿದ್ದ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಿದೆ. ಹೌದು…ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ತನ್ನ ಕೃಪೆ ತೋರಿದ್ದಾನೆ. ಇದರಿಂದ ಬಿಸಿಲಿನ ಶಾಖಕ್ಕೆ ಕಂಗೆಟ್ಟಿದ್ದ ಜನ ಕೊಂಚ ನಿಟ್ಟುಸಿರುಬಿಟ್ಟಿದ್ದಾರೆ. ಇನ್ನು ಪ್ರಾಣಿಗಳು ಸಹ ಫುಲ್ ಖುಷ್ ಆಗಿದ್ದು, ಕಾಡಿನಲ್ಲಿ ಓಡಾಡಲು ಆರಂಭಿಸಿವೆ. ಮೈಸೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿರು ಬೇಸಿಗೆಯಿಂದ ಬಸವಳಿದಿದ್ದ ವನ್ಯಜೀವಿಗಳಿಗೆ ಖುಷಿಯಾಗಿದೆ. ಉತ್ತಮ ಮಳೆಯಿಂದಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಂತು ಜೀವ ಕಳೆ ಬಂದಿದ್ದು, ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳ ಕಲರವ ಮತ್ತೆ ಎಂದಿನಂತೆ ಶುರುವಾಗಿದೆ. ಮಳೆಯಾಗಿದ್ದರಿಂದ ಕಬಿನಿ ಹಿನ್ನೀರಿನಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗಿದೆ. ಬಿರು ಬೇಸಿಗೆಯಿಂದ ಒಣಗಿ ನಿಂತ ಕಾಡು ಕೊಂಚ ಕೂಲ್ ಆಗಿದ್ದರೆ, ಆನೆ,ಹುಲಿ, ಜಿಂಕೆ, ಸೇರಿದಂತೆ ಎಲ್ಲಾ ಪ್ರಾಣಿಗಳ ಬಿಂದಾಸ್ ಓಡಾಟ ನಡೆಸಿವೆ.