ಬಸನಗೌಡ ಪಾಟೀಲ್ ಇನ್ನೆಷ್ಟು ದಿನ ಮುಸ್ಲಿಂ ವಿರೋಧಿ ಕಾರ್ಡ್ ಪ್ಲೇ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ? ತಬ್ಬು ದಿನೇಶ್ ಗುಂಡೂರಾವ್
ಯಾರದ್ದೋ ಹೆಂಡತಿ ಮತ್ತು ಮಕ್ಕಳ ಬಗ್ಗೆ ಅವರು ಮಾತಾಡಬಹುದೆ? ಭಾರತ ಮಾತೆ ಅಂತ ಹೇಳುವ ಅವರು ಹೆಣ್ಣುಮಕ್ಕಳಿಗೆ ಕೊಡುವ ಗೌರವ ಇದೇನಾ? ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳ ಬಗ್ಗೆ ಅವರು ಮಾತಾಡಲಿ, ಇನ್ನೆಷ್ಟು ದಿನ ಅವರು ಅವರು ಮುಸ್ಲಿಂ ವಿರೋಧಿ ಕಾರ್ಡ್ ಪ್ಲೇ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ತಬ್ಬು ದಿನೇಶ್ ಹೇಳಿದ್ದಾರೆ.
ಬೆಂಗಳೂರು: ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡುವ ಭರದಲ್ಲಿ ಓವರ್ ದಿ ಬೋರ್ಡ್ ಹೋಗುವುದು ಹೊಸದೇನಲ್ಲ. ಮೊನ್ನೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬಗ್ಗೆ ಕಾಮೆಂಟ್ ಮಾಡುವಾಗ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಅಂತ ಅವರ ಪತ್ನಿ ತಬ್ಬು ದಿನೇಶ್ ಗುಂಡೂರಾವ್ (Tabu Dinesh Gundu Rao) ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ. ಅವರ ಕಾಮೆಂಟ್ ನಿಂದ ತಬ್ಬು ಸಿಡಿದೆದ್ದಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರುವ ಅವರು, ಬಸನಗೌಡ ಯತ್ನಾಳ್ ತನ್ನ ಪತಿ ದಿನೇಶ್ ಅವರ ಬಗ್ಗೆ ಮಾತಾಡುವಾಗ ತನ್ನ ವಿರುದ್ಧ ಕಾಮೆಂಟ್ ಮಾಡಿದ್ದಾರೆ ಮತ್ತು ಅದರ ಹಿಂದಿನ ಉದ್ದೇಶ ತನಗರ್ಥವಾಗಿಲ್ಲ, ತಾನು ರಾಜಕೀಯದಿಂದ ದೂರವುಳಿದು ಆರ್ ಗುಂಡೂರಾವ್ ಫೌಂಡೇಶನ್ ನಡೆಸುತ್ತಿರುವ ತನ್ನ ಬಗ್ಗೆ ಯತ್ನಾಳ್ ಮಾತಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಯಾರದ್ದೋ ಹೆಂಡತಿ ಮತ್ತು ಮಕ್ಕಳ ಬಗ್ಗೆ ಅವರು ಮಾತಾಡಬಹುದೆ? ಭಾರತ ಮಾತೆ ಅಂತ ಹೇಳುವ ಅವರು ಹೆಣ್ಣುಮಕ್ಕಳಿಗೆ ಕೊಡುವ ಗೌರವ ಇದೇನಾ? ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳ ಬಗ್ಗೆ ಅವರು ಮಾತಾಡಲಿ, ಇನ್ನೆಷ್ಟು ದಿನ ಅವರು ಅವರು ಮುಸ್ಲಿಂ ವಿರೋಧಿ ಕಾರ್ಡ್ ಪ್ಲೇ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ತಬ್ಬು ದಿನೇಶ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ: ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ದೂರು