ಹವಾನಿಯಂತ್ರಿತ ಕ್ಕಿನಿಕ್ ನಿಂದ ಹೊರಬಂದು ದಾವಣಗೆರೆಯ ಸುಡುಬಿಸಿಲಲ್ಲಿ ಮತಯಾಚಿಸುತ್ತಿರುವ ಡಾ ಪ್ರಭಾ ಮಲ್ಲಿಕಾರ್ಜುನ
15 ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಚೌಡಮ್ಮ ದೇವಿ ಜಾತ್ರೆಗೆ ಬಂದಿದ್ದನ್ನು ಹೇಳಿದ ಡಾ ಪ್ರಭಾ ದೇವಿಯ ಆಶೀರ್ವಾದ ಪಡೆದುಕೊಂಡಾಗಿದೆ ಈಗ ಜನರ ಆಶೀರ್ವಾದ ಬೇಕಾಗಿದೆ, ಸರಿಯಾಗಿ ಒಂದು ತಿಂಗಲ ನಂತರ ಲೋಕಸಭಾ ಚುನಾವಣೆಗೆ ನಡೆಯುವ ಮತದಾನದಲ್ಲಿ ಮತದಾರರು ತನ್ನ ಪರವಾಗಿ ತಮ್ಮ ಹಕ್ಕು ಚಲಾಯಿಸಬೇಕೆಂದು ವಿನಂತಿಸಿಕೊಂಡರು.
ದಾವಣಗೆರೆ: ದಂತವೈದ್ಯೆಯೂ ಅಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ (Dr Prabha Mallikarjun) ತಮ್ಮ ಹವಾನಿಯಂತ್ರಿತ ಕ್ಲಿನಿಕ್ ಬಿಟ್ಟು ಸುಡು ಬಿಸಿಲಲ್ಲಿ ದಾವಣಗೆರೆಯ ಹಳ್ಳಿಗಳನ್ನು ಸುತ್ತುತ್ತಾ ಮತ ಯಾಚಿಸುತ್ತಿದ್ದಾರೆ. ಇಂದು ಅವರು ಜಗಳೂರು ತಾಲ್ಲೂಕಿನ ಗ್ರಾಮಮಗಳಲ್ಲಿ ರೋಡ್ ಶೋಗಳನ್ನು (road show) ನಡೆಸುತ್ತಾ ವೋಟುಗಳ ಬೇಟೆ (campaigning) ನಡೆಸಿದರು. ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ ಅವರು ತೆರೆದ ವಾಹನವೊಂದರಿಂದ ಜನರನ್ನು ಅಡ್ರೆಸ್ ಮಾಡುವಾಗ ತಾನು ಅವರಿಗೆ ಮತ್ತು ಆ ಊರಿಗೆ ಹೊಸಬಳೇನೂ ಅಲ್ಲ ಅನ್ನೋದನ್ನು ಒತ್ತಿ ಹೇಳಿದರು. 15 ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಚೌಡಮ್ಮ ದೇವಿ ಜಾತ್ರೆಗೆ ಬಂದಿದ್ದನ್ನು ಹೇಳಿದ ಡಾ ಪ್ರಭಾ ದೇವಿಯ ಆಶೀರ್ವಾದ ಪಡೆದುಕೊಂಡಾಗಿದೆ ಈಗ ಜನರ ಆಶೀರ್ವಾದ ಬೇಕಾಗಿದೆ, ಸರಿಯಾಗಿ ಒಂದು ತಿಂಗಲ ನಂತರ ಲೋಕಸಭಾ ಚುನಾವಣೆಗೆ ನಡೆಯುವ ಮತದಾನದಲ್ಲಿ ಮತದಾರರು ತನ್ನ ಪರವಾಗಿ ತಮ್ಮ ಹಕ್ಕು ಚಲಾಯಿಸಬೇಕೆಂದು ವಿನಂತಿಸಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Lok Sabha elections: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್