ನಗರದಲ್ಲಿ ಸುರಿದ ಮಳೆಗೆ ಎರಡು ಮರಗಳ ಕೊಂಬೆಗಳುನ ಕಟ್ ಆಗಿ ನೆಲಕ್ಕೆ, ಯಾವುದೇ ಅಪಾಯವಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: May 13, 2025 | 5:38 PM

ಮರಗಳ ಗಣತಿ ಅಂತ ನಾವು ಹೇಳೋದು ಅವುಗಳ ಎಣಿಕೆ ಅಲ್ಲ, ನಗರದಲ್ಲರುವ ಅನೇಕ ಮರಗಳು ಮುಪ್ಪಿನ ಪ್ರಾಯ ತಲುಪಿವೆ ಮತ್ತು ಅವು ಯಾವುದೇ ಸಮಯ ಉರುಳಬಹುದು. ಬಿಬಿಎಂಪಿ ಸಿಬ್ಬಂದಿ ಅಂಥ ಮರಗಳನ್ನು ಮಳೆಗಾಲು ಶುರುವಾಗುವ ಮೊದಲು ಪತ್ತೆ ಮಾಡಿ ಕಡಿದು ಹಾಕಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಮಳೆಗಾಲ ಶುರುವಾಗಲು ಇನ್ನು ಕೇವಲ ಮೂರ್ನಾಲ್ಕು ವಾರಗಳ ಸಮಯ ಮಾತ್ರ ಉಳಿದಿದೆ.

ಬೆಂಗಳೂರು, ಮೇ 13: ಬೆಂಗಳೂರಿಗೆ ಜಾತಿ ಗಣತಿ ಮತ್ತು ಜನಗಣತಿಯ (Census) ಅವಶ್ಯಕತೆ ಇದೆಯೋ ಇಲ್ವೋ ಗೊತ್ತಿಲ್ಲ ಮಾರಾಯ್ರೇ, ಆದರೆ ಮರ ಗಣತಿಯ ಜರೂರತ್ತು ನಿಶ್ವಯವಾಗಿಯೂ ಇದೆ. ಇಲ್ನೋಡಿ ನಗರದಲ್ಲಿ ಇಂದು ಸುರಿದ ಭಾರೀ ಮಳೆಗೆ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ಮತ್ತು ಕಾವೇರಿ ಜಂಕ್ಷನ್ ಬಳಿಯ ಮರಗಳ ಕೊಂಬೆ ಮುರಿದು ನೆಲಕ್ಕುರುಳಿವೆ. ಅದೃಷ್ಟವಶಾತ್ ಜನರಿಗಾಗಲೀ, ವಾಹನಗಳಿಗಾಗಲೀ ಸಮಸ್ಯೆ ಅಗಿಲ್ಲ. ಅದರೆ ಇದು ಬಿಬಿಎಂಪಿಗೆ ಎಚ್ಚರಿಕೆಯ ಗಂಟೆ, ಮಾನ್ಸೂನ್ ಇನ್ನು ಶುರುವಾಗಬೇಕಿದೆ, ಒಂದು ಮಳೆಗೆ ನಗರದ ಸ್ಥಿತಿ ಹೀಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.