Video: ತಿರುಪುರದ ವಿನಾಯಕ ದೇವಸ್ಥಾನದೊಳಗೆ ನಮಾಜ್ ಮಾಡಿದ ಅಜ್ಮಲ್ ಖಾನ್

Updated on: Oct 30, 2025 | 12:04 PM

ತಿರುಪುರ-ಮಂಗಳಂ ರಸ್ತೆಯ ಸೆಂಗುಂತಪುರಂನಲ್ಲಿರುವ ರಾಜ ಗಣಪತಿ ದೇವಸ್ಥಾನದಲ್ಲಿ ಮುಸ್ಲಿಂ ಯುವಕನೊಬ್ಬ ಮುಖ್ಯ ದ್ವಾರದ ಕಡೆಗೆ ಬೆನ್ನು ತಿರುಗಿಸಿ ನಮಾಜ್ ಮಾಡಿದ್ದಾನೆ. ಇದು ಹಿಂದೂ ಭಕ್ತರಿಗೆ ತೀರಾ ನೋವುಂಟು ಮಾಡಿದೆ. ಪೂಚುಕಾಡು ನಿವಾಸಿ ಅಜ್ಮಲ್ ಖಾನ್ ಅಕ್ಟೋಬರ್ 26ರಂದು ದೇವಸ್ಥಾನಕ್ಕೆ ಪ್ರವೇಶಿಸಿದ್ದಾನೆ. ಆತ ನಮಾಜ್ ಮಾಡುತ್ತಿರುವುದನ್ನು ನೋಡಿದ ದೇವಾಲಯದ ಅರ್ಚಕ ನಾಗನಾಥನ್ ಮತ್ತು ಭಕ್ತರು ಆತನನ್ನು ದೇವಸ್ಥಾನದಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ. ಆದರೂ ಅದನ್ನು ಲೆಕ್ಕಿಸದೆ ಆತ ನಮಾಜ್ ಮುಂದುವರೆಸಿದ್ದಾನೆ. ಹೆಚ್ಚಿನ ಜನರ ಸಹಾಯದಿಂದ ಆತನನ್ನು ದೇವಸ್ಥಾನದ ಆವರಣದಿಂದ ಹೊರಗೆ ಕರೆದೊಯ್ಯಲಾಯಿತು. ಇದು ಅಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ತಂದೊಡ್ಡಿತ್ತು. ತಮಿಳುನಾಡು ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ತಿರುಪುರ, ಅಕ್ಟೋಬರ್ 30: ತಿರುಪುರ–ಮಂಗಳಂ ರಸ್ತೆಯ ಸೆಂಗುಂತಪುರಂನಲ್ಲಿರುವ ರಾಜ ಗಣಪತಿ ದೇವಸ್ಥಾನದಲ್ಲಿ ಮುಸ್ಲಿಂ ಯುವಕನೊಬ್ಬ ಮುಖ್ಯ ದ್ವಾರದ ಕಡೆಗೆ ಬೆನ್ನು ತಿರುಗಿಸಿ ನಮಾಜ್ ಮಾಡಿದ್ದಾನೆ. ಇದು ಹಿಂದೂ ಭಕ್ತರಿಗೆ ತೀರಾ ನೋವುಂಟು ಮಾಡಿದೆ. ಪೂಚುಕಾಡು ನಿವಾಸಿ ಅಜ್ಮಲ್ ಖಾನ್ ಅಕ್ಟೋಬರ್ 26ರಂದು ದೇವಸ್ಥಾನಕ್ಕೆ ಪ್ರವೇಶಿಸಿದ್ದಾನೆ. ಆತ ನಮಾಜ್ ಮಾಡುತ್ತಿರುವುದನ್ನು ನೋಡಿದ ದೇವಾಲಯದ ಅರ್ಚಕ ನಾಗನಾಥನ್ ಮತ್ತು ಭಕ್ತರು ಆತನನ್ನು ದೇವಸ್ಥಾನದಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ. ಆದರೂ ಅದನ್ನು ಲೆಕ್ಕಿಸದೆ ಆತ ನಮಾಜ್ ಮುಂದುವರೆಸಿದ್ದಾನೆ. ಹೆಚ್ಚಿನ ಜನರ ಸಹಾಯದಿಂದ ಆತನನ್ನು ದೇವಸ್ಥಾನದ ಆವರಣದಿಂದ ಹೊರಗೆ ಕರೆದೊಯ್ಯಲಾಯಿತು. ಇದು ಅಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ತಂದೊಡ್ಡಿತ್ತು. ತಮಿಳುನಾಡು ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More