Daily Horoscope: ಚಂದ್ರ ಮೇಷ ರಾಶಿಯಲ್ಲಿ, ರವಿ ವೃಷಭ ರಾಶಿಯಲ್ಲಿ ಸಂಚಾರ

Updated on: May 26, 2025 | 6:46 AM

ಮೇ 26ರ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಾಫಲಗಳನ್ನು ತಿಳಿಸಿಕೊಟ್ಟಿದ್ದಾರೆ. ಚಂದ್ರ ಮೇಷ ರಾಶಿಯಲ್ಲಿದ್ದು, ರವಿ ವೃಷಭ ರಾಶಿಯಲ್ಲಿದೆ. ಈ ದಿನ ಶಿವಾರಾಧನೆಗೆ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ. ರಾಹುಕಾಲ ಮತ್ತು ಶುಭಕಾಲದ ಸಮಯವನ್ನು ಸಹ ತಿಳಿಸಲಾಗಿದೆ.

ಬೆಂಗಳೂರು, ಮೇ 26: ಈ ದಿನ ಭರಣಿ ನಕ್ಷತ್ರ, ಶೋಭನ ಯೋಗ ಮತ್ತು ಶಕುನಿ ಕರಣ, ರಾಹುಕಾಲ ಬೆಳಗ್ಗೆ 7:28 ರಿಂದ 9:04 ರವರೆಗೆ ಮತ್ತು ಶುಭಕಾಲ ಮಧ್ಯಾಹ್ನ 3:28 ರಿಂದ 5:04 ರವರೆಗೆ ಇರುತ್ತದೆ. ಚಂದ್ರ ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ರವಿ ವೃಷಭ ರಾಶಿಯಲ್ಲಿದೆ. ನಾಳೆ ಅಮಾವಾಸ್ಯೆಯಾಗಿರುವುದರಿಂದ ಇಂದು ಶಿವನಾಮ ಜಪ ಮಾಡುವುದು ಉತ್ತಮ ಎಂದು ಗುರೂಜಿ ಹೇಳಿದ್ದಾರೆ. ವಿಡಿಯೋ ನೋಡಿ.