ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ನ ಸಿಸಿಟಿವಿ ದೃಶ್ಯ; ಹೆಲ್ಮೆಟ್ನಿಂದ ಬಚಾವ್
ಸಾಯಿ ಧರಮ್ ತೇಜ್ ಅವರ ಆಕ್ಸಿಡೆಂಟ್ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟನಿಗೆ ಗಂಭೀರ ಗಾಯಗಳಾಗಿವೆಯಾದರೂ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವರದಿ ಆಗಿದೆ.
ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ, ನಟ ಸಾಯಿ ಧರಮ್ ತೇಜ್ಗೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಸ್ಪೋರ್ಟ್ ಬೈಕ್ ಓಡಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೈದರಾಬಾದ್ನ ಮಾದಾಪುರ ಕೇಬಲ್ ಬ್ರಿಡ್ಜ್ ಬಳಿ ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಬೈಕ್ ಸ್ಕಿಡ್ ಆಗಿದೆ. ಈ ಆಕ್ಸಿಡೆಂಟ್ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟನಿಗೆ ಗಂಭೀರ ಗಾಯಗಳಾಗಿವೆಯಾದರೂ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವರದಿ ಆಗಿದೆ.
ಸಾಯಿ ಧರಮ್ ತೇಜ್ ಅವರನ್ನು ನೋಡಲು ಪವನ್ ಕಲ್ಯಾಣ್, ಅಲ್ಲು ಅರವಿಂದ್ ಮುಂತಾದವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಲಗಣ್ಣು, ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯ ಸಾಯಿ ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ‘ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೂ ಕೂಡ ಹೆದರುವಂಥದ್ದು ಏನೂ ಇಲ್ಲ. ಆಮೇಲೆ ಎಲ್ಲವೂ ಗೊತ್ತಾಗಲಿದೆ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇದನ್ನೂ ಓದಿ:
Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್ ತೇಜ್; ಆದರೆ ಆಪ್ತರು ಹೇಳೋದೇ ಬೇರೆ
Sai Dharam Tej: ನಟ ಸಾಯಿ ಧರಮ್ತೇಜ್ ಬೈಕ್ ಸ್ಕಿಡ್ ಆಗಲು ಕಾರಣವೇನು?; ಇಲ್ಲಿದೆ ಮಾಹಿತಿ