ದಾವಣಗೆರೆ: ಭಾರಿ ಮಳೆಗೆ ಕೊಚ್ಚಿ ಹೋದ 25 ಸಾವಿರ ಮೌಲ್ಯದ ಟೊಮೇಟೊ, ವಿಡಿಯೋ ವೈರಲ್

Edited By: ಆಯೇಷಾ ಬಾನು

Updated on: Aug 21, 2024 | 9:43 AM

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದಿಢೀರನೆ ಸುರಿದ ಭಾರಿ ಮಳೆಗೆ ಟೊಮೇಟೊ ಹಣ್ಣುಗಳು ಕೊಚ್ಚಿಕೊಂಡು ಹೋಗಿವೆ. ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವರಿಗೆ ಸೇರಿದ ಟೊಮೇಟೊಗಳು ನೀರುಪಾಲಾಗಿದ್ದು ರೈತನಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟುವಾಗಿದೆ.

ದಾವಣಗೆರೆ, ಆಗಸ್ಟ್​.21: ಜಿಲ್ಲೆಯಲ್ಲಿ‌ ಮಳೆ ಅಬ್ಬರ ಜೋರಾಗಿದೆ. ಚನ್ನಗಿರಿ ತಾಲೂಕಿನ ಬಿಲ್ಲಳ್ಳಿಯಲ್ಲಿ‌ತಡ ರಾತ್ರಿ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿತ್ತು (Davanagere Rain). ನಿರಂತರವಾಗಿ ಒಂದು ಗಂಟೆಗಳ‌ ಕಾಲ‌ ಸುರಿದ ಮಳೆಗೆ ಗ್ರಾಮದ ಗದ್ದೆ ಹಾಗೂ ಮನೆಗಳು ಜಲಾವೃತವಾಗಿದ್ದು ಮನೆಯಿಂದ ನೀರು ಹೊರ ಹಾಕಲು‌ ಗ್ರಾಮಸ್ಥರು ಪರದಾಡಿದ್ರು. ಇನ್ನು ಮತ್ತೊಂದೆಡೆ ಭಾರಿ ಮಳೆಗೆ ಟೊಮೇಟೊಗಳು (Tomato) ಕೊಚ್ಚಿಕೊಂಡು ಹೋಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದಿಢೀರನೆ ಸುರಿದ ಭಾರಿ ಮಳೆಗೆ ಟೊಮೇಟೊ ಹಣ್ಣುಗಳು ಕೊಚ್ಚಿಕೊಂಡು ಹೋಗಿವೆ. ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವರಿಗೆ ಸೇರಿದ ಟೊಮೇಟೊಗಳು ನೀರುಪಾಲಾಗಿದ್ದು ರೈತನಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟುವಾಗಿದೆ. ಇನ್ನು ಈ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಜಮೀನಿನಲ್ಲಿ ಟೊಮೇಟೊ ಬಾಕ್ಸ್​ಗೆ ತುಂಬುತ್ತಿದ್ದಾಗ ಭಾರಿ ಮಳೆಯಾಗಿದ್ದು. ಏಕಾಏಕಿ ಒಂದು ಘಂಟೆಗೂ ಹೆಚ್ಚು ಕಾಲ ಮಳೆ ಬಂದಿದೆ. ಇದರಿಂದ ಬಾಕ್ಸ್ ಗೆ ತುಂಬಲು ರಾಶಿ ಹಾಕಿದ್ದ ಟೊಮೇಟೊ ನೀರು ಪಾಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More