Wrestlers intensify protest: ನ್ಯಾಯಕ್ಕಾಗಿ ಹೋರಾಡುತ್ತಲೇ ಜಂತರ್ ಮಂತರ್ ನಲ್ಲಿ ಅಭ್ಯಾಸ ಮತ್ತು ತರಬೇತಿ ಮುಂದುವರಿಸಿದ ಕುಸ್ತಿಪಟುಗಳು

Wrestlers intensify protest: ನ್ಯಾಯಕ್ಕಾಗಿ ಹೋರಾಡುತ್ತಲೇ ಜಂತರ್ ಮಂತರ್ ನಲ್ಲಿ ಅಭ್ಯಾಸ ಮತ್ತು ತರಬೇತಿ ಮುಂದುವರಿಸಿದ ಕುಸ್ತಿಪಟುಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 27, 2023 | 6:15 PM

2024 ಒಲಂಪಿಕ್ಸ್ ಬಹಳ ದೂರವೇನೂ ಇಲ್ಲ ಮತ್ತು ಅದಕ್ಕೂ ಮೊದಲು ಹಲವಾರು ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯಲಿವೆ. ಹಾಗಾಗಿ, ಕುಸ್ತಿಪಟುಗಳು ಅಭ್ಯಾಸ ನಿಲ್ಲಿಸಿ ಕೇವಲ ಪ್ರತಿಭಟನೆಗೆ ಕೂತರಾಗದು.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India) ಮುಖ್ಯಸ್ಥ ನೀಡಿದ ಲೈಂಗಿಕ ಕಿರುಕುಳದ (sexual harassment) ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತ ಅಗ್ರಮಾನ್ಯ ಕುಸ್ತಿಪಟುಗಳು (top wrestlers) ಗುರುವಾರ ಕೂಡ ಸಾರ್ವಜನಿಕವಾಗಿಯೇ ತರಬೇತಿ ಮತ್ತು ದೈಹಿಕ ಕಸರತ್ತಿನಲ್ಲಿ ತೊಡಗಿದರು. ಪೈಲ್ವಾನರಿಗೆ ವೃತ್ತಿಪರ ಮ್ಯಾಟ್ ಗಳು ಲಭ್ಯವಿರದ ಕಾರಣ ಸಾಧಾರಣ ದರ್ಜೆಯ ಗಾದಿಗಳ ಮೇಲೆ ಅಭ್ಯಾಸ ನಡೆಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಧಿಯಿಲ್ಲದೆ ತಾವು ನಿಷ್ಪ್ರಯೋಜಕ ಬೆಡ್ ಗಳ ಅಭ್ಯಾಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

 ಇದನ್ನೂ ಓದಿ: Adult Education: ಮಧ್ಯಪ್ರದೇಶದ ಗ್ರಾಮವೊಂದರ ಶಿಕ್ಷಕ ಡಿಜಿಟಲ್ ಪ್ರೊಜೆಕ್ಟರ್ ಬಳಸಿ ಅವಿದ್ಯಾವಂತ ವಯಸ್ಕರಿಗೆ ಶಿಕ್ಷಣ ನೀಡುತ್ತಿದ್ದಾರೆ!

2024 ಒಲಂಪಿಕ್ಸ್ ಬಹಳ ದೂರವೇನೂ ಇಲ್ಲ ಮತ್ತು ಅದಕ್ಕೂ ಮೊದಲು ಹಲವಾರು ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯಲಿವೆ. ಹಾಗಾಗಿ, ಕುಸ್ತಿಪಟುಗಳು ಅಭ್ಯಾಸ ನಿಲ್ಲಿಸಿ ಕೇವಲ ಪ್ರತಿಭಟನೆಗೆ ಕೂತರಾಗದು. ನ್ಯಾಯಕ್ಕಾಗಿ ಹೋರಾಡುತ್ತಲೇ ಅವರು ಸಾರ್ವಜನಿಕವಾಗಿ ಅಭ್ಯಾಸವನ್ನೂ ಮಾಡುತ್ತಿದ್ದಾರೆ.

ಗುರುವಾರ ಬೆಳಗ್ಗೆ ಭಾರತಕ್ಕೆ ಒಲಂಪಿಕ್ಸ್, ವಿಶ್ವ ಕುಸ್ತಿ ಚಾಂಪಿಯನ್ ಶಿಪ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಪದಕಗಳನ್ನು ಗೆದ್ದಿರುವ ಭಜರಂಗ್ ಪೂನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಮತ್ತು ಸತ್ಯವ್ರತ್ ಕಡಿಯಾನ್ ಸೇರಿದಂತೆ ಇನ್ನೂ ಹಲವಾರು ಕುಸ್ತಿಪಟುಗಳು ಬೆಳಗ್ಗೆ 7.30 ರಿಂದ 8:45 ರವರೆಗೆ ಅಭ್ಯಾಸದಲ್ಲಿ ತೊಡಗಿದ್ದರು.

ಇದನ್ನೂ ಓದಿ: Ajith Kumar: ನೇಪಾಳದಲ್ಲಿ ಶೆಫ್ ಆದ ತಮಿಳು ನಟ ಅಜಿತ್ ಕುಮಾರ್​; ಇಲ್ಲಿದೆ ವಿಡಿಯೋ

ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಗುರುವಾರ ತೀವ್ರಗೊಳಿಸಿದ ಪೈಲ್ವಾನರು ಅವರನ್ನು ಲೈಂಗಿಕ ಶೋಷಣೆಯ ಆರೋಪಗಳಲ್ಲಿ ಬಂಧಿಸದ ಹೊರತು ಪ್ರತಿಭಟನೆಯಿಂದ ಹಿಂತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 27, 2023 06:14 PM