AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajith Kumar: ನೇಪಾಳದಲ್ಲಿ ಶೆಫ್ ಆದ ತಮಿಳು ನಟ ಅಜಿತ್ ಕುಮಾರ್​; ಇಲ್ಲಿದೆ ವಿಡಿಯೋ

ಅಜಿತ್ ಕುಮಾರ್ ಪ್ರತಿ ಸಿನಿಮಾ ಗೆದ್ದ ಬಳಿಕ ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ‘ತುನಿವು’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಗೆದ್ದಿದೆ. ಹೀಗಾಗಿ ಅವರು ನೇಪಾಳದಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ.

Ajith Kumar: ನೇಪಾಳದಲ್ಲಿ ಶೆಫ್ ಆದ ತಮಿಳು ನಟ ಅಜಿತ್ ಕುಮಾರ್​; ಇಲ್ಲಿದೆ ವಿಡಿಯೋ
ಅಜಿತ್ ಕುಮಾರ್
ರಾಜೇಶ್ ದುಗ್ಗುಮನೆ
|

Updated on:Apr 26, 2023 | 2:41 PM

Share

ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರು ವಿಶೇಷ ಎನಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣವೂ ಇದೆ. ಅವರು ಕೇವಲ ಸಿನಿಮಾಗಳಲ್ಲಿ ಮಾತ್ರ ತೊಡಗಿಕೊಳ್ಳುವುದಿಲ್ಲ. ಬೈಕ್ ರೇಸ್ ಮಾಡುತ್ತಾರೆ. ಬೈಕ್​ನಲ್ಲೇ ದೇಶ ವಿದೇಶ ಸುತ್ತುತ್ತಾರೆ. ಈಗ ಅವರು ನೇಪಾಳದಲ್ಲಿ ಶೆಫ್ ಆಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ಅಜಿತ್ ಕುಮಾರ್ ಪ್ರತಿ ಸಿನಿಮಾ ಗೆದ್ದ ಬಳಿಕ ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ಅವರ ನಟನೆಯ ‘ತುನಿವು’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಈ ಚಿತ್ರ ಗೆದ್ದು ಬೀಗಿದೆ. ಈ ಸಿನಿಮಾ ಗೆದ್ದ ಬೆನ್ನಲ್ಲೇ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ನೇಪಾಳದಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಈ ವೇಳೆ ಅವರು ಹೋಟೆಲ್ ಒಂದರಲ್ಲಿ ಅಡುಗೆ ಮಾಡಿದ್ದಾರೆ. ಈ ವೇಳೆ ಅವರು ಶೆಫ್ ಬಟ್ಟೆ ಹಾಕಿದ್ದು ವಿಶೇಷವಾಗಿತ್ತು.

‘ತುನಿವು’ ರಿಲೀಸ್ ಆಗುವುದಕ್ಕೂ ಮೊದಲು ಅಜಿತ್ ಅವರು ಉತ್ತರ ಭಾರತದ ಭಾಗದಲ್ಲಿ ಬೈಕ್ ರೈಡ್ ಮಾಡಿದ್ದರು. ಈಗ ಅವರು ನೇಪಾಳದಲ್ಲಿ ಬೈಕ್ ಓಡಿಸುತ್ತಿದ್ದಾರೆ. ಬೈಕ್ ಓಡಿಸಿ ಸುಸ್ತಾದರೆ ಅವರು ಸಾಮಾನ್ಯರಂತೆ ಸಣ್ಣ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ. ಈ ರೀತಿ ತಂಗಿದ ಸ್ಥಳೀಯ ಹೋಟೆಲ್ ಒಂದರಲ್ಲಿ ಊಟ ತಯಾರಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಫುಲ್ ಟೈಮ್ ನಟ, ಪಾರ್ಟ್​ ಟೈಮ್ ಶೆಫ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಅಜಿತ್ ಒಳ್ಳೆಯ ಜೀವನ ನಡೆಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Thunivu Movie: ‘ತುನಿವು’ ರಿಲೀಸ್ ವೇಳೆ ಅವಘಡ; ಅಜಿತ್ ಕುಮಾರ್ ಅಭಿಮಾನಿ ಸಾವು 

‘ತುನಿವು’ ರಿಲೀಸ್​ ಬಳಿಕ ಅಜಿತ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಾರೆ ಎನ್ನಲಾಗಿದೆ. ಆದರೆ, ಅವರು ಸಿನಿಮಾದಿಂದ ಹೊರ ಬಿದ್ದಿದ್ದಾರೆ. ನಿರ್ಮಾಪಕರಿಗೆ ಕಥೆ ಇಷ್ಟ ಆಗದ ಕಾರಣ ವಿಘ್ನೇಶ್ ಅವರನ್ನು ಹೊರಗಿಡಲಾಗಿದೆ. ಮೇ 1ರಂದು ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:41 pm, Wed, 26 April 23