ಬೈಕ್ ರೇಸ್ ನೋಡ್ತಿದ್ರೆ ಮೈ ಜುಮ್ಮೆನ್ನುತ್ತೆ, ಹಾಸನದಲ್ಲಿ ಮೋಡಿ ಮಾಡಿದ ಬೊಂಬಾಟ್ ಬೈಕ್ ರೇಸ್

ಹಾಸನ: ಕ್ಯೂರಿಯಾಸಿಟಿ ಅಂದ್ರೆ ಏನು ಅಂತಾ ಗೊತ್ತಾಗ್ಬೇಕು ಅಂದ್ರೆ ಆ ಕಾಂಪಿಟೇಷನ್​ ನೋಡ್ಬೇಕು. ಮಣ್ಣಿನಲ್ಲೇ ಸಿದ್ಧವಾಗಿದ್ದ ಅಖಾಡ. ಮುಗಿಲೆತ್ತರಕ್ಕೂ ಎದ್ದೇಳೋ ಧೂಳು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಯುದ್ಧ ಶುರುವಾಗಿಯೇ ಬಿಟ್ಟಿತ್ತು. ಯಾವ ಕುಸ್ತಿಗೂ ಕಮ್ಮಿ ಇಲ್ಲದಂತೆ ಕದನಕಲಿಗಳು ಖದರ್ ತೋರಿಸಿದ್ರು. ಜಸ್ಟ್ ರುಽಂಯ್.. ರುಽಂಯ್ ಸದ್ದು.. ಕಂಡಲ್ಲೆಲ್ಲ ಬರೀ ಧೂಳು.. ಬೈಕ್​ಗಳು ಜಿದ್ದಿಗೆ ಬಿದ್ದಂತೆ ನುಗ್ತಿದ್ರೆ ನೋಡುಗರು ಸ್ಟನ್ ಆಗಿದ್ರು. ಪ್ರತೀ ಟರ್ನಿಂಗ್ ಬಂದಾಗ್ಲೂ ಹಾರ್ಟ್ ಬೀಟ್ ಕೂಡ ರೈಸ್ ಆಗ್ತಾನೇ ಇತ್ತು. ಹಂಗ್ ಬಂದು ಹಿಂಗ್ […]

ಬೈಕ್ ರೇಸ್ ನೋಡ್ತಿದ್ರೆ ಮೈ ಜುಮ್ಮೆನ್ನುತ್ತೆ, ಹಾಸನದಲ್ಲಿ ಮೋಡಿ ಮಾಡಿದ ಬೊಂಬಾಟ್ ಬೈಕ್ ರೇಸ್
Follow us
|

Updated on: Dec 25, 2019 | 7:40 AM

ಹಾಸನ: ಕ್ಯೂರಿಯಾಸಿಟಿ ಅಂದ್ರೆ ಏನು ಅಂತಾ ಗೊತ್ತಾಗ್ಬೇಕು ಅಂದ್ರೆ ಆ ಕಾಂಪಿಟೇಷನ್​ ನೋಡ್ಬೇಕು. ಮಣ್ಣಿನಲ್ಲೇ ಸಿದ್ಧವಾಗಿದ್ದ ಅಖಾಡ. ಮುಗಿಲೆತ್ತರಕ್ಕೂ ಎದ್ದೇಳೋ ಧೂಳು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಯುದ್ಧ ಶುರುವಾಗಿಯೇ ಬಿಟ್ಟಿತ್ತು. ಯಾವ ಕುಸ್ತಿಗೂ ಕಮ್ಮಿ ಇಲ್ಲದಂತೆ ಕದನಕಲಿಗಳು ಖದರ್ ತೋರಿಸಿದ್ರು.

ಜಸ್ಟ್ ರುಽಂಯ್.. ರುಽಂಯ್ ಸದ್ದು.. ಕಂಡಲ್ಲೆಲ್ಲ ಬರೀ ಧೂಳು.. ಬೈಕ್​ಗಳು ಜಿದ್ದಿಗೆ ಬಿದ್ದಂತೆ ನುಗ್ತಿದ್ರೆ ನೋಡುಗರು ಸ್ಟನ್ ಆಗಿದ್ರು. ಪ್ರತೀ ಟರ್ನಿಂಗ್ ಬಂದಾಗ್ಲೂ ಹಾರ್ಟ್ ಬೀಟ್ ಕೂಡ ರೈಸ್ ಆಗ್ತಾನೇ ಇತ್ತು. ಹಂಗ್ ಬಂದು ಹಿಂಗ್ ಮಾಯ ಆಗ್ತಿದ್ದವ್ರ ಖದರ್​ಗೆ ನಿಂತಲ್ಲೇ ಬೆರಗಾಗಿದ್ರು.

ಅಬ್ಬಬ್ಬಾ.. ನೋಡ್ತಿದ್ರೇನೆ ನಮಗೆ ಮೈ ಜುಂ ಅನ್ಸುತ್ತೆ. ಆದ್ರೆ ರೇಸಿಂಗ್​ಗೆ ಅಂತಾ ಅಖಾಡಕ್ಕಿಳ್ದವ್ರಿಗೆ ಇದೇ ಕಿಕ್. ಧೂಳ್ ಎಬ್ಬಿಸ್ಲೇ ಬೇಕು. ಗುರಿ ಮುಟ್ಬೇಕು ಅಂದ್ರೆ ಪವರ್ ತೋರಿಸ್ಲೇಬೇಕು. ಹಾಸನದ ಅರಸೀಕೆರೆ ರಸ್ತೆ ಪಕ್ಕದ ಮೈದಾನದಲ್ಲಿ ನಡೆದ ಬೈಕ್​ ರೇಸ್ ಇಂಥಾದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿತ್ತು. 50ಕ್ಕೂ ಹೆಚ್ಚು ಸ್ಪರ್ಧಿಗಳು ರೇಸ್​ನಲ್ಲಿ ಭಾಗಿಯಾಗಿದ್ರು. ಸುಮಾರು 800 ಮೀಟರ್ ಟ್ರ್ಯಾಕ್​ನಲ್ಲಿ ಒಂದೊಂದು ವಿಭಾಗದಲ್ಲಿ 20ಕ್ಕೂ ಹೆಚ್ಚು ಸವಾರರು ಒಂದೇ ಬಾರಿಗೆ ಮೈದಾನದಲ್ಲಿ ಪೈಪೋಟಿ ನಡೆಸಿದ್ರು. ಒಬ್ರಿಗಿಂತ ಒಬ್ರು ಫುಲ್ ಸ್ಪೀಡ್​ನಲ್ಲಿ ಮುನ್ನುಗ್ತಿದ್ರೆ ನೋಡುಗರ ಮೈ ರೋಮಾಂಚನವಾಗ್ತಿತ್ತು..

ಹಾಸನಲ್ಲಿ ಕಳೆದ 2ವರ್ಷಗಳಿಂದ ಬೈಕ್ ರೇಸ್ ಆಯೋಜನೆ ಮಾಡಲಾಗ್ತಿದ್ದು, ಹಾಸನ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಡ್ಯ ಸೇರಿದಂತೆ ಬೇರೆ ರಾಜ್ಯಗಳಿಂದ್ಲೂ ಹಲವು ಸ್ಪರ್ಧಿಗಳು ಭಾಗಿಯಾಗಿದ್ರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಟ್ಯಾಲೆಂಟ್ ತೋರಿದ್ದ ರೇಸರ್​ಗಳು ತಮ್ಮ ಸಾಮರ್ಥ್ಯದ ಮೂಲಕ ಎಲ್ಲರ ಹುಬ್ಬೇರಿಸಿದ್ರು. ಹಲವು ವಿಭಾಗಗಳಲ್ಲಿ ನಡೆದ ಗೇಮ್ ನೋಡೋ ಜನ್ರಿಗೆ ಮಸ್ತ್ ಕಿಕ್ ಕೊಟ್ಟಿತ್ತು. ಬೈಕ್ ಸವಾರರು ಧೂಳು ಸೀಳಿಕೊಂಡು ರಾಕೆಟ್​ಗಳಂತೆ ಮುನ್ನುಗ್ಗುತ್ತಿದ್ರೆ ಆಯೋಜಕರು ಕೂಡ ಖುಷಿಯಾಗಿದ್ರು.

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್