- Kannada News Photo gallery Prabhas starrer Adipurush Movie trailer likely to be released in May first week
Adipurush Trailer: ‘ಆದಿಪುರುಷ್’ ಟ್ರೇಲರ್ಗಾಗಿ ಹೆಚ್ಚಾಗಿದೆ ಅಭಿಮಾನಿಗಳ ಕಾತರ; ಯಾವಾಗ ಸರ್ಪ್ರೈಸ್ ಕೊಡ್ತಾರೆ ಪ್ರಭಾಸ್?
Prabhas | Adipurush Movie: ‘ಆದಿಪುರುಷ್’ ಟೀಸರ್ ಬಿಡುಗಡೆ ಆದಾಗ ಟ್ರೋಲ್ ಮಾಡಲಾಗಿತ್ತು. ಬಳಿಕ ಚಿತ್ರತಂಡ ಎಚ್ಚೆತ್ತುಕೊಂಡಿತು. ಈಗ ಟ್ರೇಲರ್ ಹೇಗೆ ಮೂಡಿಬಂದಿರಬಹುದು ಎಂಬ ಕೌತುಕ ಪ್ರೇಕ್ಷಕರಲ್ಲಿದೆ.
Updated on: Apr 26, 2023 | 1:20 PM

ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್ ಮುಂತಾದವರು ನಟಿಸಿರುವ ‘ಆದಿಪುರುಷ್’ ಸಿನಿಮಾದ ಬಿಡುಗಡೆಗಾಗಿ ಫ್ಯಾನ್ಸ್ ಕಾದಿದ್ದಾರೆ. ಟ್ರೇಲರ್ಗಾಗಿ ಕಾತರ ಹೆಚ್ಚಾಗಿದೆ.

ಓಂ ರಾವತ್ ಅವರು ‘ಆದಿಪುರುಷ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಮಾಯಣವನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ಜೂನ್ 16ರಂದು ‘ಆದಿಪುರುಷ್’ ತೆರೆಕಾಣಲಿದೆ.

ಟೀಸರ್ ಬಿಡುಗಡೆ ಆದಾಗ ‘ಆದಿಪುರುಷ್’ ಚಿತ್ರತಂಡವನ್ನು ಟ್ರೋಲ್ ಮಾಡಲಾಗಿತ್ತು. ನಂತರ ಗ್ರಾಫಿಕ್ಸ್ ದೃಶ್ಯಗಳನ್ನು ಬದಲಿಸುವ ತೀರ್ಮಾನಕ್ಕೆ ಬರಲಾಯ್ತು. ಈಗ ಟ್ರೇಲರ್ ಹೇಗೆ ಮೂಡಿಬಂದಿರಬಹುದು ಎಂಬ ಕೌತುಕ ಪ್ರೇಕ್ಷಕರಲ್ಲಿದೆ.

ಮೇ ಮೊದಲ ವಾರದಲ್ಲಿ ‘ಆದಿಪುರುಷ್’ ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡವರು ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಬೇಕಿದೆ.

ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಈವರೆಗೂ ಬಿಡುಗಡೆ ಆಗಿರುವ ಪೋಸ್ಟರ್ಗಳು ಗಮನ ಸೆಳೆದಿವೆ. ಪ್ರಭಾಸ್ ಅವರಿಗೆ ಈ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.



















