ಬ್ರಾ ಸರಿಯಾಗಿ ಧರಿಸದಿರುವುದು ಕೂಡ ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಡಾ. ಹೇಮಂತ್‌ ಸಲಹೆ

Updated on: Nov 28, 2025 | 4:06 PM

ಇತ್ತೀಚಿನ ದಿನಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆ, ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್‌- ಸರ್ಜಿಕಲ್‌ ಆನ್‌ಕೊಲಾಜಿ ಮತ್ತು ರೊಬೊಟಿಕ್‌ ಸರ್ಜರಿ ತಜ್ಞ ಡಾ. ಹೇಮಂತ್‌ ಜಿ ಎನ್‌. ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಮತ್ತಷ್ಟು ಮಾಹಿತಿ ವಿಡಿಯೋದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದಕ್ಕೆ ಕಾರಣಗಳು ಹಲವಾರಿದ್ದರೂ ಕೂಡ ಈ ಬಗ್ಗೆ ಸರಿಯಾದ ಮಾಹಿತಿ ಕೊರತೆ ಇರುವುದು ಎದ್ದು ಕಾಣುತ್ತಿದೆ. ಕೆಲವು ಮೂಢನಂಬಿಕೆಗಳು ಕೂಡ ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಹಾಗಾಗಿ ಮೊಲೆಗಳಲ್ಲಿ ನೋವಿಲ್ಲದ ಗಂಟು ಕಂಡುಬಂದಾಗ ಏನು ಮಾಡಬೇಕು, ನಿಮ್ಮ ಹಿಂದಿನ ತಲೆಮಾರಿನಲ್ಲಿ ಈ ಸಮಸ್ಯೆ ಯಾರಿಗೂ ಇಲ್ಲದಿದ್ದರೆ ಅದು ನಿಮಗೆ ಬರುವುದಿಲ್ಲವೇ, ಡಿಯೋಡರೆಂಟ್ ಬಳಕೆ, ಅಥವಾ ಕೆಲವು ಆಹಾರಗಳ ಸೇವನೆ ಅಥವಾ ಬ್ರಾಗಳನ್ನು ಸರಿಯಾಗಿ ಧರಿಸದಿರುವುದು ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವಾಗುತ್ತದೆಯೇ ಎನ್ನುವಂತಹ ಗೊಂದಲಕ್ಕೆ ಅಥವಾ ಉತ್ತರವಿಲ್ಲದ ಪ್ರಶ್ನೆಗಳಿಗೆ ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆ, ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್‌- ಸರ್ಜಿಕಲ್‌ ಆನ್‌ಕೊಲಾಜಿ ಮತ್ತು ರೊಬೊಟಿಕ್‌ ಸರ್ಜರಿ ತಜ್ಞ ಡಾ. ಹೇಮಂತ್‌ ಜಿ ಎನ್‌. (Dr. Hemanth G N) ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.