Jaggesh: ರೀಲ್ಸ್ ಮಾಡ್ತೀರಾ? ಹಾಗಾದ್ರೆ, ಜಗ್ಗೇಶ್ ಹೇಳಿದ ಈ ಮಾತು ಕೇಳಿ ಸ್ವಲ್ಪ..
Totapuri Movie: ‘ತೋತಾಪುರಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್ ಮಾತನಾಡಿದ್ದಾರೆ. ರೀಲ್ಸ್ ಮಾಡುವವರ ಸ್ಟೈಲ್ ಯಾವ ರೀತಿ ಇರುತ್ತದೆ ಎಂಬುದನ್ನು ತಮ್ಮದೇ ರೀತಿಯಲ್ಲಿ ಅವರು ವಿವರಿಸಿದ್ದಾರೆ.
ನಟ ಜಗ್ಗೇಶ್ (Jaggesh) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಬಣ್ಣದ ಲೋಕದಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡು ಇಲ್ಲಿಯವರೆಗೆ ಬಂದಿದ್ದಾರೆ. ಆರಂಭದ ದಿನಗಳಲ್ಲಿ ಅವರು ಪಟ್ಟ ಕಷ್ಟಗಳು ಒಂದೆರಡಲ್ಲ. ಆದರೆ ಈಗಿನ ಕಾಲದಲ್ಲಿ ಜನರಿಗೆ ಎಲ್ಲವೂ ಸುಲಭ ಆಗಿದೆ. ರೀಲ್ಸ್ (Reels) ಮಾಡುವವರು ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುತ್ತಾರೆ. ಆ ಬಗ್ಗೆ ‘ತೋತಾಪುರಿ’ (Totapuri Movie) ಚಿತ್ರದ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್ ಮಾತನಾಡಿದ್ದಾರೆ. ರೀಲ್ಸ್ ಮಾಡುವವರ ಸ್ಟೈಲ್ ಯಾವ ರೀತಿ ಇದೆ ಎಂಬುದನ್ನು ತಮ್ಮದೇ ರೀತಿಯಲ್ಲಿ ಅವರು ವಿವರಿಸಿದ್ದಾರೆ. ‘ತೋತಾಪುರಿ’ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಜಗ್ಗೇಶ್ ಜತೆ ಅತಿದಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್ ಮುಂತಾದವರು ನಟಿಸಿದ್ದಾರೆ.
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್

