ಬೆಳಂ ಬೆಳಿಗ್ಗೆ ನಂದಿಗಿರಿಧಾಮಕ್ಕೆ ಬಂದ ಪ್ರವಾಸಿಗರು; ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರೇಮಿಗಳು
ಬದುಕಿನಲ್ಲಿ ಒಲವೇ ವಿಸ್ಮಯ ಎನಿಸುವ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಲು ಇವತ್ತು ಪ್ರೇಮಿಗಳು ನಂದಿಬೆಟ್ಟಕ್ಕೆ ಬೆಳಕು ಹರಿಯುವ ಮುನ್ನವೇ ಹೃದಯದ ತುಂಬಾ ನಂದಿಬೆಟ್ಟಕ್ಕಿಂತಲೂ ಎತ್ತರವಾದ ಬೆಚ್ಚನೆಯ ಪ್ರೇಮದ ಭಾವನೆಗಳನ್ನು ಹೊತ್ತು ಬಂದಿದ್ದರು.
ಚಿಕ್ಕಬಳ್ಳಾಪುರ: ಇವತ್ತು ಹೇಳಿ ಕೇಳಿ ಪ್ರೇಮಿಗಳ ದಿನಾಚರಣೆ. ಪ್ರೀತಿ ಪ್ರೇಮದ ಕ್ಷಣಗಳನ್ನು ಅವಿಸ್ಮರಣೀಯ ಗೊಳಿಸೋಕೆ ಕರ್ನಾಟಕದಲ್ಲಿ ನೂರಾರು ಸ್ಥಳಗಳಿದ್ದರೂ ನಂದಿಬೆಟ್ಟ ಒಂದು ವಿಶೇಷವಾದ ಸ್ಥಳ. ಅಲ್ಲಿ ಬೀಸುವ ತಂಗಾಳಿ, ತೇಲೋ ಮೋಡಗಳು, ಸೂರ್ಯೋದಯ ಸೊಬಗು ಪ್ರೇಮಿಗಳ ಪ್ರೀತಿಯ ಭಾವನೆಗಳನ್ನು ನೂರು ಪಟ್ಟು ಹೆಚ್ಚು ಮಾಡುತ್ತವೆ. ಬದುಕಿನಲ್ಲಿ ಒಲವೇ ವಿಸ್ಮಯ ಎನಿಸುವ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಲು ಇವತ್ತು ಪ್ರೇಮಿಗಳು ನಂದಿಬೆಟ್ಟಕ್ಕೆ ಬೆಳಕು ಹರಿಯುವ ಮುನ್ನವೇ ಹೃದಯದ ತುಂಬಾ ನಂದಿಬೆಟ್ಟಕ್ಕಿಂತಲೂ ಎತ್ತರವಾದ ಬೆಚ್ಚನೆಯ ಪ್ರೇಮದ ಭಾವನೆಗಳನ್ನು ಹೊತ್ತು ಬಂದಿದ್ದರು.
Valentines Day: ಪ್ರೇಮಿಗಳ ದಿನ ಹೂ ರಾಜನಿಗೆ ಭಾರೀ ಬೇಡಿಕೆ, ಪ್ರೀತಿಯ ರಾಯಭಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!
Published on: Feb 14, 2022 09:03 AM