ಬೆಳಗಾವಿ: ಖಾಕಿ ಸಮವಸ್ತ್ರಧಾರಿಗಳಿಂದ ನಡುರಸ್ತೆಯಲ್ಲಿ ಹೊಡೆದಾಟ, ಬೈದಾಟ, ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ!!
ಇದೆಲ್ಲ ಸಾರ್ವಜನಿಕರಿಗೆ ತಮಾಷೆಯಾಗಿ ಕಾಣುತ್ತದೆ. ಕಂಡಕ್ಟರ್ ಮತ್ತು ಪೇದೆ ನಡುವೆ ಅವಾಚ್ಯ ಶಬ್ದಗಳಲ್ಲಿ ಪರಸ್ಪರ ನಿಂದನೆ ಜಾರಿಯಿಡುತ್ತಾರೆ. ಅಲ್ಲಿ ಶಾಲೆಗೆ ಹೋಗುವ ಮಕ್ಕಳೂ ಬಂದು ನೆರೆಯುತ್ತಾರೆ.
ಇಬ್ಬರೂ ಸರ್ಕಾರಿ ನೌಕರರು ಮತ್ತು ಇಬ್ಬರಿಗೂ ಖಾಕಿ ಸಮವಸ್ತ್ರ. ಹಾಗಾಗಿ ಅವರಿಂದ ಜವಾಬ್ದಾರಿಯುತ ವರ್ತನೆಯನ್ನು ನಿರೀಕ್ಷಿಸಲಾಗುತ್ತದೆ. ಆದರೆ ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್ನಲ್ಲಿ ಒಬ್ಬ ಸಂಚಾರಿ ಮುಖ್ಯ ಪೇದೆ ಮತ್ತು ನಗರ ಸಾರಿಗೆ ಬಸ್ಸೊಂದರ ನಿರ್ವಾಹಕ ಮಾತ್ರ ನಡುರಸ್ತೆಯಲ್ಲಿ ಸಾರ್ವಜನಿಕರೆದುರು ಅದರಲ್ಲೂ ಶಾಲಾಮಕ್ಕಳ ಎದುರು ಚಿಕ್ಕಮಕ್ಕಳಂತೆ ವರ್ತಿಸಿ ಹೊಡೆದಾಡಿ ಬೈದಾಡಿದರು. ಸಿಟಿಬಸ್ಸನ್ನು ಸಿಗ್ನಲ್ ಬಳಿ ನಿಲ್ಲಿಸಿ ಜನರನ್ನು ಇಳಿಸಿದ್ದಕ್ಕೆ ಪೇದೆಗೆ ಕೋಪ ಬಂದಿದೆ. ಅವರು ಬಸ್ಸಿನ ನಿರ್ವಾಹಕ ಇಲ್ಲವೇ ಚಾಲಕನಿಗೆ ವಾಹನವನ್ನು ಕಂಡೆಲ್ಲೆಲ್ಲ ನಿಲ್ಲಿಸಬೇಡಿ ಅಂತ ನಯವಾಗಿ ಗದರಿದರೆ ಸಾಕಿತ್ತು. ಆದರೆ ಪೇದೆ, ಸಾರಿಗೆ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ್ದಾರೆ. ಅವರ ಭಾಷೆ ಕೇಳಿ ನಿರ್ವಾಹಕನಿಗೂ ಕೋಪವುಕ್ಕಿ ಬಸ್ನಿಂದ ಕೆಳಗಿಳಿದು ಪೇದೆಯೊಂದಿಗೆ ವಾದ ಮಾಡಲಾರಂಭಿಸಿದ್ದಾರೆ.
ಪೇದೆ ಮುಂಗೋಪಿ ಅನಿಸುತ್ತದೆ. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಅವರು ಕಂಡಕ್ಟರ್ ಕೆನ್ನೆಗೆ ಬಾರಿಸಿದ್ದಾರೆ. ಕಂಡಕ್ಟರ್ ಸಹ ಪೇದೆಗೆ ಕಪಾಳಮೋಕ್ಷ ಮಾಡಿರುವಂತೆ ಕಾಣುತ್ತಿದೆ. ಜಗಳದ ತೀವ್ರತೆ ಹೆಚ್ಚುತ್ತಿದಂತೆ ಅಲ್ಲಿದ್ದ ಬೇರೆ ಟ್ರಾಫಿಕ್ ಪೊಲೀಸರು ಅಲ್ಲಿಗೆ ಧಾವಿಸಿ ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಸಾರಿಗೆ ಸಿಬ್ಬಂದಿಗೆ ಜೋರು ಮಾಡುತ್ತಾರೆಯೇ ಹೊರತು ತಮ್ಮ ಸಹೋದ್ಯೋಗಿಗೆ ಒಂದು ಮಾತನ್ನೂ ಹೇಳುವುದಿಲ್ಲ.
ಇದೆಲ್ಲ ಸಾರ್ವಜನಿಕರಿಗೆ ತಮಾಷೆಯಾಗಿ ಕಾಣುತ್ತದೆ. ಕಂಡಕ್ಟರ್ ಮತ್ತು ಪೇದೆ ನಡುವೆ ಅವಾಚ್ಯ ಶಬ್ದಗಳಲ್ಲಿ ಪರಸ್ಪರ ನಿಂದನೆ ಜಾರಿಯಿಡುತ್ತಾರೆ. ಅಲ್ಲಿ ಶಾಲೆಗೆ ಹೋಗುವ ಮಕ್ಕಳೂ ಬಂದು ನೆರೆಯುತ್ತಾರೆ. ಒಂದೆರಡು ಮಾತುಗಳಲ್ಲಿ ಮುಗಿಯಬೇಕಿದ್ದ ಈ ವಿಷಯ ನಡುರಸ್ತೆಯಲ್ಲಿ ಒಂದು ಸೀನ್ ಆಗಿ ಮಾರ್ಪಡುತ್ತದೆ.
ಇದೆಲ್ಲ ಬೇಕಿತ್ತಾ ಸಾರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರೇ?
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಆಣೆ ಪ್ರಮಾಣ, ಹಣದ ಆಮಿಷ; ವಿಡಿಯೋ ವೈರಲ್