ಓದಿದ್ದು ಮೆಡಿಕಲ್ ಆದರೆ ಆಗಿರೋದು ಮಾಡೆಲ್! ಸಾರಾ ತೆಂಡೂಲ್ಕರ್ ರೂಪದರ್ಶಿಯಾಗಿ ಗ್ಲಾಮರ್ ಲೋಕಕ್ಕೆ ಕಾಲಿಟ್ಟಿದ್ದಾರೆ!

ಸೆಲ್ಫ್-ಪೋರ್ಟ್ರೇಟ್ ಹೆಸರಿನ ಒಂದು ಅಂತರರಾಷ್ಟ್ರೀಯ ಉಡುಪಿನ ಬ್ರ್ಯಾಂಡ್​ಗೆ ಸಾರಾ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬ್ರ್ಯಾಂಡಿನ ಬಟ್ಟೆಗಳು ಕೇವಲ ಇ-ಕಾಮರ್ಸ್ ಪ್ಲಾಟ್​ಫಾರ್ಮ್​ ಅಜಿಯೋ ಲೂಕ್ಸ್​ನಲ್ಲಿ ಮಾತ್ರ ಸಿಗುತ್ತವೆ.

ಅಮ್ಮ ತುಳಿದ ದಾರಿಯಲ್ಲೇ ಸಾಗಿದ ಮಗಳು, ತಂದೆಯ ಹಾಗೆ ಖ್ಯಾತಿವಂತನಾಗಲು ಪ್ರಯತ್ನಿಸುತ್ತಿರುವ ಮಗ-ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಚಿಕ್ಕ ಪರಿವಾರಕ್ಕೆ ಈ ಮಾತು ಬಹಳ ಚೆನ್ನಾಗಿ ಸೂಟ್ ಆಗುತ್ತದೆ ಮಾರಾಯ್ರೇ. ನಿಮಗೆ ಗೊತ್ತಿದೆ, ಸಚಿನ್ ಹಿರಿಯ ಮಗಳು 24-ವರ್ಷ ವಯಸ್ಸಿನ ಸಾರಾ ತೆಂಡೂಲ್ಕರ್ ಅವರು ತನ್ನ ತಾಯಿ ಅಂಜಲಿ ತೆಂಡೂಲ್ಕರ್ ಅವರಂತೆ ಮೆಡಿಕಲ್ ಓದಿದ್ದಾರೆ. ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನ ಹಾಗೆ ಕ್ರಿಕೆಟ್ ಲೋಕದಲ್ಲಿ ಮಿಂಚಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಲಂಡನ್ ನಲ್ಲಿ ನೆಲೆಸಿರುವ ಸಾರಾಗೆ ಡಾಕ್ಟರ್ ಅಂತ ಕರೆಸಿಕೊಳ್ಳುವುದಕ್ಕಿಂತ ರೂಪದರ್ಶಿಯಾಗುವೆಡೆ ಹೆಚ್ಚು ಒಲವಿದ್ದಂತಿದೆ.

ಹೌದು, ಇದು ಸತ್ಯ. ಸೆಲ್ಫ್-ಪೋರ್ಟ್ರೇಟ್ ಹೆಸರಿನ ಒಂದು ಅಂತರರಾಷ್ಟ್ರೀಯ ಉಡುಪಿನ ಬ್ರ್ಯಾಂಡ್​ಗೆ ಸಾರಾ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬ್ರ್ಯಾಂಡಿನ ಬಟ್ಟೆಗಳು ಕೇವಲ ಇ-ಕಾಮರ್ಸ್ ಪ್ಲಾಟ್​ಫಾರ್ಮ್​ ಅಜಿಯೋ ಲೂಕ್ಸ್​ನಲ್ಲಿ ಮಾತ್ರ ಸಿಗುತ್ತವೆ. ತಮ್ಮ ಪ್ರಮೋಶನಲ್ ವಿಡಿಯೋವನ್ನು ಸಾರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅವರು ಶೇರ್ ಮಾಡಿರುವ ವಿಡಿಯೋನಲ್ಲಿ ಬಾಲಿವುಡ್ ನಟಿ ಬನಿತಾ ಸಂಧು ಮತ್ತು ಮತ್ತು ಉದ್ಯಮಿ ಜೈದೇವ್ ಶ್ರಾಫ್ ಅವರ ಮಗಳು ತಾನಿಯಾ ಶ್ರಾಫ್ ಸಹ ಇದ್ದಾರೆ. ಈ ಮೂವರು 2013ರಲ್ಲಿ ಹ್ಯಾನ್ ಚಾಂಗ್ ಎನ್ನುವವರು ಸ್ಥಾಪಿಸಿದ ಸೆಲ್ಫ್-ಪೋರ್ಟ್ರೇಟ್ ಬ್ರ್ಯಾಂಡಿನ ಉಡುಪುಗಳಿಗೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ.

ಸಾರಾ ವೈದ್ಯಕೀಯ ವ್ಯಾಸಂಗ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮಾಡಿರುವರಾದರೂ ಆರಂಭಿಕ ಶಿಕ್ಷಣ ಪೂರೈಸಿದ್ದು ಮುಂಬೈನಲ್ಲಿ. ಅವರು ರೂಪದರ್ಶಿಯಾಗಿ ಕರೀಯರ್ ಮುಂದುವರಿಸುತ್ತಾರೋ ಅಥವಾ ಸಚಿನ್ ಅವರನ್ನು ಮದುವೆಯಾಗುವ ಮೊದಲು ಪುಣೆಯ ಆಸ್ಪತ್ರೆಯೊಂದರಲ್ಲಿ ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದ ಅಮ್ಮನ ಹಾಗೆ ವೈದ್ಯಕೀಯ ವೃತ್ತಿಯನ್ನು ಆರಿಸಿಕೊಳ್ಳುತ್ತಾರೋ ಕಾದು ನೋಡಬೇಕು.

ಇದನ್ನೂ ಓದಿ:  Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್

Click on your DTH Provider to Add TV9 Kannada