ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿರುವವರಿಗೆ ಸಿಹಿಸುದ್ದಿ, ವಾಹನಗಳ ಹೋಮ್ ಡೆಲಿವರಿ ಡಿಸೆಂಬರ್ 15ರಿಂದ ಆರಂಭ!

ನವೆಂಬರ್ 10 ರಂದು ಓಲಾ ಕಂಪನಿಯು ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಓಲಾ 1 ಮತ್ತು ಓಲಾ1 ಪ್ರೋ ಸ್ಕೂಟರ್​ಗಳ ಟೆಸ್ಟ್ ಡ್ರೈವ್

TV9kannada Web Team

| Edited By: Arun Belly

Dec 08, 2021 | 5:26 PM

ಬಹಳ ಜನರ ಹಾಗೆ ನೀವು ಸಹ ಓಲಾ ಎಸ್ 1 ಇಲ್ಲವೇ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿ ಅದಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರೆ, ನಿಮ್ಮ ನಿರೀಕ್ಷೆ ಕೊನೆಗೊಂಡಿದೆ ಅಂತ ನಾವಲ್ಲ ಓಲಾ ಕಂಪನಿಯ ಸಿಈಓ ಭಾವಿಶ್ ಅಗರ್ವಾಲ್ ಹೇಳುತ್ತಿದ್ದಾರೆ. ನಿಮಗೆ ಗೊತ್ತಿದೆ, ಓಲಾ ಕಂಪನಿ ಆಗಸ್ಟ್ನಲ್ಲಿ ಓಲಾ ಎಸ್1 ಮತ್ತು ಓಲಾ ಎಸ್1 ಪ್ರೋ ಇವಿಗಳನ್ನು ಲಾಂಚ್ ಮಾಡಿತ್ತು ಮತ್ತು ಅದೇ ತಿಂಗಳು ತನ್ನ ವೆಬ್ಸೈಟ್ ಮೂಲಕ ಆನ್ ಲೈನ್ ಬುಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿತ್ತು. ಭಾವಿಶ್ ಅವರು ಸ್ಕೂಟರ್ಗಳ ವಿತರಣೆಯನ್ನು ಅಕ್ಟೋಬರ್ ನಲ್ಲಿ ಆರಂಭಿಸುವುದಾಗಿ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಡೆಲಿವರಿ ಪ್ರಕ್ರಿಯೆ ವಿಳಂಬಗೊಳ್ಳುತ್ತಾ ಸಾಗಿತ್ತು. ಆದರೆ ಈಗ ಭಾವಿಶ್ ಅವರೇ, ವಾಹನಗಳ ಡೆಲಿವರಿ ಡಿಸೆಂಬರ್ 15 ರಿಂದ ಆರಂಭಗೊಳ್ಳಲಿದೆ ಎಂದು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೆಮಿ ಕಂಡಕ್ಟರ್ಗಳ ಕೊರತೆಯಿಂದಾಗಿ ಡೆಲಿವರಿ ಪ್ರಕ್ರಿಯೆ ತಡವಾಗಿದೆ. ಸ್ಕೂಟರ್ಗಳನ್ನು ಬುಕ್ ಮಾಡಿದವರಿಗೆ ಈ ವಿಷಯ ಗಮನಕ್ಕೆ ಬಂದಿರಬಹುದು. ನವೆಂಬರ್ 10 ರಂದು ಓಲಾ ಕಂಪನಿಯು ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಓಲಾ 1 ಮತ್ತು ಓಲಾ1 ಪ್ರೋ ಸ್ಕೂಟರ್​ಗಳ ಟೆಸ್ಟ್ ಡ್ರೈವ್ ನಡೆಸಿತು. ಎಲ್ಲಾ ಕಡೆಗಳಿಂದ ಸ್ಕೂಟರ್​ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂದಹಾಗೆ, ಓಲಾ ಇವಿಗಳ ಎಕ್ಸ್ ಶೋರೂಮ್ ಬೆಲೆ ನಿಮಗೆ ನೆನೆಪಿರಬಹುದು. ಬೆಂಗಳೂರು ಸೇರಿದಂತೆ ಭಾರತದ ಹಲವಾರು ನಗರ ಮತ್ತು ರಾಜ್ಯಗಳಲ್ಲಿ ಓಲಾ ಎಸ್1 ಸ್ಕೂಟರ್ ರೂ.99,999 ಗಳಿಗೆ ಸಿಗಲಿದೆ. ಆದರೆ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಅದನ್ನು ಖರೀದಿಸಿದರೆ ನಿಮಗೆ ಶೇಕಡಾ 15 ಸಬ್ಸಿಡಿ ಸಿಗಲಿದೆ. ಹಾಗೆಯೇ, ಗುಜರಾತ್ನಲ್ಲಿ ಅದರ ಬೆಲೆ ರೂ.79,999, ರಾಜಸ್ತಾನಲ್ಲಿ ರೂ. 89,999 ಮತ್ತು ಮಹಾರಾಷ್ಟ್ರನಲ್ಲಿ ರೂ. 94,999.

ಓಲಾ ಎಸ್1 ಪ್ರೋ ಸ್ಕೂಟರ್ ಬೆಲೆ ದೆಹಲಿಯಲ್ಲಿ ರೂ. 1,10,149 ಗುಜರಾತ್ನಲ್ಲಿ ರೂ.1,09,999, ರಾಜಸ್ತಾನಲ್ಲಿ ರೂ. 1,19,999 ಮತ್ತು ಮಹಾರಾಷ್ಟ್ರನಲ್ಲಿ ರೂ. 1,24,999. ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಓಲಾ ಎಸ್1 ಪ್ರೋ ಸ್ಕೂಟರ್ ರೂ. 1,29,999 ಗಳಿಗೆ ಸಿಗಲಿದೆ.

ಇದನ್ನೂ ಓದಿ:   Viral Video: ನವಜೋಡಿಗೆ ಸ್ನೇಹಿತರು ನೀಡಿದ ಉಡುಗೊರೆ ಹೇಗಿತ್ತು ಗೊತ್ತಾ? ವೈರಲ್ ಆದ ವಿಡಿಯೋ ನೋಡಿ

Follow us on

Click on your DTH Provider to Add TV9 Kannada