ಸೊಟ್ರೋವಿಮಾಬ್ ಚುಚ್ಚುಮದ್ದು ಒಮೈಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ಮತ್ತು ಪರೀಕ್ಷೆಗಳು ಸಾಬೀತು ಮಾಡಿವೆ

ಕ್ಲಿನಿಕಲ್ ಪ್ರಯೋಗಗಳಲ್ಲಿ, ಸಾಧಾರಣದಿಂದ ಮಧ್ಯಮ ಕೋವಿಡ್ ಸೋಂಕಿತ ವ್ಯಕ್ತಿಗಳಲ್ಲಿ ಸೊಟ್ರೋವಿಮಾಬ್ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ಶೇಕಡಾ 79% ರಷ್ಟು ಕಡಿಮೆ ಮಾಡಿದೆ.

ಆರಂಭಿಕ ಹಂತದ ಪರೀಕ್ಷೆಗಳು ಮತ್ತು ಇತ್ತೀಚಿಗೆ ಲಭ್ಯವಾಗಿರುವ ಪುರಾವೆಗಳ ಪ್ರಕಾರ ತನ್ನ ಪಾಲುದಾರ ವಿರ್ ಬಯೋಟೆಕ್ನಾಲಜಿಯೊಂದಿಗೆ ಗ್ಲ್ಯಾಕ್ಸೋಸ್ಮಿತ್ಲೈನ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆ ಉತ್ಪಾದಿಸಿರುವ ಪ್ರತಿಕಾಯ-ಆಧಾರಿತ ಕೋವಿಡ್-19 ಸೋಂಕಿನ ವಿರುದ್ಧ ಬಳಸಲಾಗುತ್ತಿರುವ ಇಂಜೆಕ್ಷನ್ ನಾವೆಲ್ ಒಮೈಕ್ರಾನ್ ಸ್ಟ್ರೈನ್‌ ಸೇರಿದಂತೆ ಕೊರೋನಾ ವೈರಸ್ ಎಲ್ಲಾ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಡಿಸೆಂಬರ್ 7 ರಂದು ಗ್ಲ್ಯಾಕ್ಸೋ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಗಮನಿಸಿದ್ದೇಯಾದರೆ, ತಜ್ಞರಿಂದ ಪರಿಶೀಲಿಸಲ್ಪಟ್ಟು ಇನ್ನೂ ಪಬ್ಲಿಷ್ ಆಗಿರದ ವೈದ್ಯಕೀಯ ಪುರಾವೆಗಳ ಪ್ರಕಾರ, ಸಂಸ್ಥೆಯ ಕೋವಿಡ್ ಡ್ರಗ್ ಸೊಟ್ರೋವಿಮಾಬ್ ಚುಚ್ಚುಮದ್ದು ಇಲ್ಲಿಯವರೆಗೆ ಬೆಳಕಿಗೆ ಬಂದಿರುವ ಎಲ್ಲಾ 37 ಸ್ಪೈಕ್ ಪ್ರೋಟೀನ್ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಒಮೈಕ್ರಾನ್ ಸಂಶ್ಲೇಷಿತ ರೂಪಾಂತರವನ್ನು ಪುನರಾವರ್ತಿಸುವ ಕೃತ್ರಿಮ-ವೈರಸ್ ವಿರುದ್ಧ ನಡೆಸಿದ ವಿಟ್ರೊ ಪರೀಕ್ಷೆಗಳಲ್ಲಿ, ಗ್ಲ್ಯಾಕ್ಸೋ-ವೀರ್ ನ ಪ್ರತಿಕಾಯ ಚಿಕಿತ್ಸೆಯಾದ ಸೊಟ್ರೋವಿಮಾಬ್ ಚುಚ್ಚುಮದ್ದು, ನಿರ್ಣಾಯಕ ಬದಲಾವಣೆಗಳನ್ನು ಮಾತ್ರವಲ್ಲದೆ, ಒಮೈಕ್ರಾನ್ ರೂಪಾಂತರದ ಸ್ಪೈಕ್ ಪ್ರೋಟೀನ್‌ನಲ್ಲಿನ ಎಲ್ಲಾ ಬದಲಾವಣೆಗಳನ್ನು ಮೆಟ್ಟಿನಿಲ್ಲುತ್ತದೆ ಎಂದು ಬಹಿರಂಗಪಟ್ಟಿದೆ.

ಈಗ ಜಾರಿಯಲ್ಲಿರುವ ಔಷಧಿಗಳು ಮತ್ತು ಲಸಿಕೆಗಳ ರಕ್ಷಣೆಯನ್ನು ಒಮೈಕ್ರಾನ್ ಎಷ್ಟು ದುರ್ಬಲಗೊಳಿಸುತ್ತದೆ ಎಂಬ ಪ್ರಶ್ನೆಗಳ ನಡುವೆಯೇ ಗ್ಲ್ಯಾಕ್ಸೊ ಸಂಸ್ಥೆಯ ಕಾಮೆಂಟ್‌ಗಳು ಹೊರಬಿದ್ದಿವೆ. ವೈರಸ್ನ ಹಲವಾರು ರೂಪಾಂತರಗಳು, ವಿಶೇಷವಾಗಿ ಹೆಚ್ಚಿನ ಚಿಕಿತ್ಸೆಗಳ ಗುರಿಯಾಗಿರುವ ಸ್ಪೈಕ್ ಪ್ರೊಟೀನ್‌ನಲ್ಲಿ, ಪ್ರಪಂಚದಾದ್ಯಂತದ ವೈದ್ಯಕೀಯ ಸಮುದಾಯ ಮತ್ತು ಸಂಶೋಧಕರಲ್ಲಿ ಆತಂಕ ಮೂಡಿಸಿದೆ.

ಕ್ಲಿನಿಕಲ್ ಪ್ರಯೋಗಗಳಲ್ಲಿ, ಸಾಧಾರಣದಿಂದ ಮಧ್ಯಮ ಕೋವಿಡ್ ಸೋಂಕಿತ ವ್ಯಕ್ತಿಗಳಲ್ಲಿ ಸೊಟ್ರೋವಿಮಾಬ್ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ಶೇಕಡಾ 79% ರಷ್ಟು ಕಡಿಮೆ ಮಾಡಿದೆ.

ಈ ತಿಂಗಳು, ಯುನೈಟೆಡ್ ಕಿಂಗ್​ಡಮ್​ ಔಷಧ ನಿಯಂತ್ರಣ ಸಂಸ್ಥೆಯು ಸೊಟ್ರೋವಿಮಾಬ್ ಚುಚ್ಚುಮದ್ದನ್ನು ಬಳಸಲು ಅನುಮೋದನೆ ನೀಡಿದೆ. ಒಮೈಕ್ರಾನ್ ರೂಪಾಂತರಿಯು ಸೋಂಕಿತನ ದೇಹದಲ್ಲಿ ಮಾಡುವ ಬೇರೆ ಬದಲಾವಣೆಗಳ ವಿರುದ್ಧವೂ ಸೊಟ್ರೋವಿಮಾಬ್ ಪರಿಣಾಮಕಾರಿಯಾಗಿದೆ ಎಂದು ಗ್ಲ್ಯಾಕ್ಸೋ ಕಳೆದ ವಾರ ಹೊರಡಿಸಿದ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಆದರೆ ಇತ್ತೀಚಿನ ಅಧ್ಯಯನಗಳು ಇದು ರೂಪಾಂತರವನ್ನು ಮೆಟ್ಟಿನಿಲ್ಲಬಲ್ಲದು ಎಂಬುದಕ್ಕೆ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಚುಚ್ಚುಮದ್ದಿನ ಪ್ರತಿಕಾಯಗಳು ಕೋವಿಡ್ ಚಿಕಿತ್ಸೆಗಳ ಶಸ್ತ್ರಾಗಾರದಲ್ಲಿ ಕೇವಲ ಒಂದು ಸಾಧನವಾಗಿದೆ, ಆದರೆ ಲಸಿಕೆಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸದ ರೋಗನಿರೋಧಕ-ರಾಜಿ ಹೊಂದಿರುವ ವ್ಯಕ್ತಿಗಳಿಗೆ ಅವು ನಿರ್ಣಾಯಕವಾಗಬಹುದು.

ಇದನ್ನೂ ಓದಿ:   ನಾನು ಯಾರನ್ನೂ ಟೂರ್​ಗೆ ಕಳಿಸುತ್ತಿಲ್ಲ; ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

Click on your DTH Provider to Add TV9 Kannada