ನಾನು ಯಾರನ್ನೂ ಟೂರ್​ಗೆ ಕಳಿಸುತ್ತಿಲ್ಲ; ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ನಿಮ್ಮ ಜೊತೆ ನಿಮ್ಮ ಮನೆ ಮಗಳಾಗಿ ನಾನು ಯಾವತ್ತೂ ಇರುತ್ತೀನಿ. ನನ್ನ ತಮ್ಮ, ನನ್ನ ಕಾಂಗ್ರೆಸ್ ಪಕ್ಷ, ನನ್ನ ಕಾಂಗ್ರೆಸ್ ಮುಖಂಡರು ಜೊತೆಗೆ ಇರುತ್ತಾರೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೆಲವು ಜನ ಲಕ್ಷ್ಮೀ ಹೆಬ್ಬಾಳ್ಕರ್ ಟೂರ್​ಗೆ ಕರೆದಿದ್ದಾರೆ ಎಂದು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ನಾನು ಯಾರನ್ನೂ ಟೂರ್​ಗೆ ಕಳಿಸುತ್ತಿಲ್ಲ, ತಾವೂ ಕೂಡ ಯಾಮಾರಬೇಡಿ. ಇಲ್ಲೇ ಇದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್ ನೀಡಿರುವ ನಿಮ್ಮ ಮತದಾನದ ಹಕ್ಕು ಚಲಾಯಿಸಿ. ಯಾವುದೇ ಒತ್ತಡಕ್ಕೆ, ಯಾವುದೇ ಧಮ್ಕಿಗೆ ತಾವು ಹೆದರುವ ಅವಶ್ಯಕತೆ ಇಲ್ಲ. ನಾನಂತೂ ಎಲ್ಲಿಯೂ ಯಾರನ್ನೂ ಟೂರ್ಗೆ ಕಳಿಸುತ್ತಿಲ್ಲ. ನ್ಯಾಯಯುತವಾದಂತ ಮತ್ತು ಫೇರ್ ಚುನಾವಣೆ ನಾವು ಮಾಡೋಣ. ಎಲ್ಲರೂ ನನಗೆ ಸಹಾಯ ಮಾಡಿ, ಸಹಕಾರ ಮಾಡಿ, ಆಶೀರ್ವಾದ ಮಾಡಿ. ನಿಮ್ಮ ಜೊತೆ ನಿಮ್ಮ ಮನೆ ಮಗಳಾಗಿ ನಾನು ಯಾವತ್ತೂ ಇರುತ್ತೀನಿ. ನನ್ನ ತಮ್ಮ, ನನ್ನ ಕಾಂಗ್ರೆಸ್ ಪಕ್ಷ, ನನ್ನ ಕಾಂಗ್ರೆಸ್ ಮುಖಂಡರು ಜೊತೆಗೆ ಇರುತ್ತಾರೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಕೊವಿಶೀಲ್ಡ್​ ಲಸಿಕೆ ಉತ್ಪಾದನೆಯಲ್ಲಿ ಶೇ.50ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದ ಅದಾರ್ ಪೂನಾವಾಲಾ

Farmers Union Meeting: ಇಂದು ಬೆಳಗ್ಗೆ 10ಗಂಟೆಗೆ ತುರ್ತು ಸಭೆ ಕರೆದ ರೈತ ಮುಖಂಡರು; ಪ್ರತಿಭಟನೆ ಮುಕ್ತಾಯದ ಘೋಷಣೆ ಸಾಧ್ಯತೆ

Click on your DTH Provider to Add TV9 Kannada