ಹಾವೇರಿ: ಕಾರ್ಮಿಕನನ್ನು ಮ್ಯಾನ್ಹೋಲ್ನೊಳಗೆ ಇಳಿಸಿದ ಅಧಿಕಾರಿಗಳು, ಸಾರ್ವಜನಿಕರಿಂದ ತರಾಟೆ, ತಪ್ಪಿದ ಅನಾಹುತ
ಹಾವೇರಿಯ ಜಿಲ್ಲೆಯ ರಾಣೆಬೆನ್ನೂರಲ್ಲಿ ಪುರಸಭೆಯ ಅಧಿಕಾರಿಗಳು ಮ್ಯಾನ್ಹೋಲ್ ಒಂದನ್ನು ಸ್ಚಚ್ಛ ಮಾಡಿಸಲು ಕಾರ್ಮಿಕನೊಬ್ಬನನ್ನು ಅದರೊಳಗೆ ಇಳಿಸಿದ್ದಾರೆ. ಅದರೆ, ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ವಿಷಯ ಗಮನಕ್ಕೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮ್ಯಾನ್ಹೋಲ್ಗಳನ್ನು (ಮಲಗುಂಡಿ) ಸ್ಚಚ್ಛಗೊಳಿಸಲು ಕಾರ್ಮಿಕರನ್ನು ಒಳಗೆ ಇಳಿಸಬಾರದೆಂದು ಸರ್ಕಾರ ಹೇಳಿದೆ, ಕೊರ್ಟುಗಳು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಕೆ ನೀಡಿವೆ. ಆದರೂ ನಿರ್ಲಜ್ಯ ಮತ್ತು ಬೇಜವಾಬ್ದಾರಿ ಅಧಿಕಾರಿಗಳು ಹಾಗೆ ಮಾಡುವುದನ್ನು ನಿಲ್ಲಿಸಿಲ್ಲ, ನಿಮಗೆ ನೆನಪಿರಬಹುದು, ಇದೇ ಜನೆವರಿಯಲ್ಲಿ ಕಲಬುರಗಿಯ ಕೈಲಾಸನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮೃತ ಪೌರ ಕಾರ್ಮಿಕನೊಬ್ಬನ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮತ್ತು ಸಹಾಯಕ ಎಂಜಿನಿಯರ್ ಸೇರಿದಂತೆ ಐವರ ವಿರುದ್ಧ ಕಲಬುರಗಿಯ ಪೊಲೀಸ್ ಠಾಣೆಯೊಂದರಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. ನಂತರ ಇದೇ ಜೂನ್ ನಲ್ಲಿ ರಾಮನಗರನಲ್ಲೂ ಇಂಥದ್ದೇ ಘಟನೆ ನಡೆದು ಮೂವರು ಕಾರ್ಮಿಕರು ಉಸಿರುಗಟ್ಟಿ ಮರಣವನ್ನಪ್ಪಿದ್ದರು.
ಇದನ್ನು ನೆನಪಿಸಿಕೊಳ್ಳಲು ಕಾರಣವಿದೆ. ಹಾವೇರಿಯ ಜಿಲ್ಲೆಯ ರಾಣೆಬೆನ್ನೂರಲ್ಲಿ ಪುರಸಭೆಯ ಅಧಿಕಾರಿಗಳು ಮ್ಯಾನ್ಹೋಲ್ ಒಂದನ್ನು ಸ್ಚಚ್ಛ ಮಾಡಿಸಲು ಕಾರ್ಮಿಕನೊಬ್ಬನನ್ನು ಅದರೊಳಗೆ ಇಳಿಸಿದ್ದಾರೆ. ಅದರೆ, ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ವಿಷಯ ಗಮನಕ್ಕೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಂದ ಮುಖಕ್ಕೆ ಉಗಿಸಿಕೊಂಡ ನಂತರ ಅಧಿಕಾರಿಗಳಿಗೆ ಜ್ಞಾನೋದಯ ಆಗಿದೆ.
ನಂತರ ಅವರು ಮ್ಯಾನ್ಹೋಲ್ನಲ್ಲಿ ಇಳಿದಿದ್ದ ವ್ಯಕ್ತಿಗೆ ಮೇಲೆ ಬರಲು ಹೇಳಿದ್ದಾರೆ. ಗುಂಡಿಗಳಲ್ಲಿ ಇಂಗಾಲದ ಡೈ ಆಕ್ಸೈಡ್ ತುಂಬಿರುವುದರಿಂದ ಅದರೊಳಗೆ ಇಳಿದವರು ಉಸಿರುಗಟ್ಟಿ ಸಾಯುತ್ತಾರೆ. ಅದು ಗೊತ್ತಿದ್ದೂ ಅಧಿಕಾರಿಗಳು ಕಾರ್ಮಿಕರನ್ನು ಅದರೊಳಗೆ ಇಳಿಸುತ್ತಾರೆಂದರೆ ಅವರು ಕ್ರಿಮಿನಲ್ಗಳೇ ಸರಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯೇ ದಾಖಲಾಗಬೇಕು.
ಇದನ್ನೂ ಓದಿ: ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಆಕರ್ಷಕ ಕಪಿಲಾ ಆರತಿ; ವಿಡಿಯೋ ನೋಡಿ