ರಾತ್ರಿಯೂಟಕ್ಕೆ ನುಗ್ಗೆಕಾಯಿ ಸಾಂಬಾರು ಅಂತ ಯೋಚಿಸುತ್ತಿದ್ದರೆ, ನಿಮಗೆ ನಿರಾಶೆಯಾಗಲಿದೆ, ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ!!!
ಚಿಕ್ಕಬಳ್ಳಾಪುರದಲ್ಲಿ ವ್ಯಾಪಾರಿಗಳು ಮಹಾರಾಷ್ಟ್ರದಿಂದ ನುಗ್ಗೆಕಾಯಿ ತರಿಸಿ ಮಾರುತ್ತಿದ್ದಾರೆ. ಹಾಗಾಗಿ, 80-100 ರೂಪಾಯಿಗಳಿಗೆ ಒಂದು ಕೆಜಿ ಸಿಗುತ್ತಿದ್ದ ನುಗ್ಗೆಕಾಯಿ ಮಂಗಳವಾರದಂದು ಕೇಜಿಗೆ ರೂ. 450-600 ರಂತೆ ಮಾರಾಟವಾಗಿದೆ.
ನುಗ್ಗೆಕಾಯಿ ಸಾಂಬಾರು ಎಂದರೆ ಬಾಯಿ ಚಪ್ಪರಿಸದವರಿಲ್ಲ, ಅದರ ರುಚಿಯೇ ಹಾಗೆ! ನುಗ್ಗೆಸೊಪ್ಪು ಮತ್ತು ಕಾಯಿಯಲ್ಲಿ ಔಷಧೀಯ ಗುಣಗಳಿವೆ. ಕೊರೋನಾ ಸೋಂಕಗೀಡಾದವರಿಗೆ ಹಸಿ ನುಗ್ಗೆಸೊಪ್ಪು ತಿನ್ನಿಸಿದರೆ, ಬೇಗ ಚೇತರಿಸಿಕೊಳ್ಳುತ್ತಾರಂತೆ. ಅದು ಸಾಬೀತಾಗಿರುವ ಅಂಶ. ಅಲ್ಲದೆ ನುಗ್ಗೆಕಾಯಿ ಉತ್ತಮ ಕಾಮೋತ್ತೇಜಕವೂ ಹೌದು. ಹಾಗಾಗಿ ಜನ ಅದನ್ನು ಇಷ್ಟಪಟ್ಟು ತಿನ್ನುವುದರಲ್ಲಿ ಅಶ್ಚರ್ಯಪಡುವಂಥದ್ದೇನೂ ಇಲ್ಲ ಬಿಡಿ ಮಾರಾಯ್ರೇ! ಸಾಮಾನ್ಯವಾಗಿ ಬೇಸಿಗೆಯಲ್ಲಿ ನುಗ್ಗೆಕಾಯಿ ಹೇರಳವಾಗಿ ಸಿಗುತ್ತವೆ. ಆದರೆ, ಹೈಬ್ರೀಡ್ ಕಾಯಿ ವರ್ಷದ ಎಲ್ಲ ಸಮಯದಲ್ಲೂ ಸಿಗುತ್ತದೆ.
ನಾವೀಗ ನುಗ್ಗೆಕಾಯಿ ಕುರಿತ ಚರ್ಚೆ ಆರಂಭಿಸಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಚಿಕ್ಕಬಳ್ಳಾಪುರದಲ್ಲಿ ಯಾವತ್ತೂ ನುಗ್ಗೆಕಾಯಿಗೆ ಕೊರತೆ ಎದುರಾಗಿರಲಿಲ್ಲ. ಆದರೆ, ಅಲ್ಲಿನ ಟಿವಿ9 ವರದಿಗಾರ ಭೀಮಪ್ಪ ಪಾಟೀಲ ಅವರು ವರದಿ ಮಾಡಿರುವ ಹಾಗೆ, ವ್ಯಾಪಾರಿಗಳು ಮಹಾರಾಷ್ಟ್ರದಿಂದ ನುಗ್ಗೆಕಾಯಿ ತರಿಸಿ ಮಾರುತ್ತಿದ್ದಾರೆ. ಹಾಗಾಗಿ, 80-100 ರೂಪಾಯಿಗಳಿಗೆ ಒಂದು ಕೆಜಿ ಸಿಗುತ್ತಿದ್ದ ನುಗ್ಗೆಕಾಯಿ ಮಂಗಳವಾರದಂದು ಕೇಜಿಗೆ ರೂ. 450-600 ರಂತೆ ಮಾರಾಟವಾಗಿದೆ.
ಮದುವೆ ಸಮಾರಂಭಗಳಲ್ಲಿ ಸಾಂಬಾರಿಗೆ ನುಗ್ಗೆಕಾಯಿ ಬೇಕೇಬೇಕು.
ಗೌರಿಬಿದನೂರಿನ ವ್ಯಕ್ತಿಯೊಬ್ಬರು ನುಗ್ಗೆಕಾಯಿ ಹುಡುಕಿಕೊಂಡು ಚಿಕ್ಕಬಳ್ಳಾಪುರದವರೆಗೆ ಬಂದಿದ್ದರಂತೆ. ಅವರ ಮನೆಯಲ್ಲಿ ಮದುವೆ ಸಮಾರಂಭ, ಅಡುಗೆಭಟ್ಟರು 10 ಕೆಜಿ ನುಗ್ಗೆಕಾಯಿ ತರಲು ಹೇಳಿದ್ದರೆ, ಅದರ ದರ ಗಗನಕ್ಕೇರಿರುವುದರಿಂದ ಕೇವಲ ಮೂರು ಕೇಜಿ ಮಾತ್ರ ತೆಗೆದುಕೊಂಡು ಹೋದರಂತೆ.
ನುಗ್ಗೆಕಾಯಿ ಬರ ಎಷ್ಟು ದಿನ ಮುಂದುವರಿಯುವುದೋ?
ಇದನ್ನೂ ಓದಿ: ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್