ನಿಖಿಲ್​ ಕುಮಾರಸ್ವಾಮಿ ನಟನೆಯ ‘ರೈಡರ್​’ ಡಿ.24ಕ್ಕೆ ರಿಲೀಸ್​; ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Rider movie Press Meet: ನಿಖಿಲ್​ ಕುಮಾರಸ್ವಾಮಿ, ಕಾಶ್ಮೀರಾ ಪರದೇಸಿ ಜೋಡಿಯಾಗಿ ನಟಿಸಿರುವ ‘ರೈಡರ್​’ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಡಿ.24ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರು ನಟಿಸಿರುವ ‘ರೈಡರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿ.24ರಂದು ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ. ಚಂದ್ರು ಮನೋಹರನ್​, ಸುನಿಲ್​ ಗೌಡ ನಿರ್ಮಾಣ ಮಾಡಿದ್ದಾರೆ. ವಿಜಯ್​ಕುಮಾರ್​ ಕೊಂಡ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಮೂಲಕ ಹಾಡುಗಳು ಹೊರಬಂದಿವೆ. ಸಿನಿಮಾದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಜೋಡಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದಾರೆ. ‘ರೈಡರ್​’ (Rider Kannada Movie) ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಈಗಾಗಲೇ ಚಿತ್ರದ ಟೀಸರ್​ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಿಖಿಲ್​ ನಟಿಸಿದ್ದಾರೆ. ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:

ಬ್ಯುಸಿ ಶೆಡ್ಯೂಲ್​ ನಡುವೆಯೂ ಕಬಡ್ಡಿ ಆಡಿದ ನಿಖಿಲ್​ ಕುಮಾರ್​

‘ಗಂಧದ ಗುಡಿ’ ಅಂದ್ರೆ ಏನು? ಇದ್ರಲ್ಲಿ ಏನೆಲ್ಲ ಇದೆ? ಅಪ್ಪು​ ಕನಸಿನ ಬಗ್ಗೆ ಪೂರ್ತಿ ಮಾಹಿತಿ ನೀಡಿದ ನಿರ್ದೇಶಕ ಅಮೋಘವರ್ಷ

Click on your DTH Provider to Add TV9 Kannada