ಬ್ಯುಸಿ ಶೆಡ್ಯೂಲ್​ ನಡುವೆಯೂ ಕಬಡ್ಡಿ ಆಡಿದ ನಿಖಿಲ್​ ಕುಮಾರ್​

ಮಂಡ್ಯದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ನಿಖಿಲ್ ಭಾಗಿಯಾಗಿದ್ದರು. ಆಟಗಾರರ ಎದುರು ಅವರು ತೊಡೆತಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದೆ.

TV9kannada Web Team

| Edited By: Rajesh Duggumane

Nov 29, 2021 | 3:24 PM

ನಟ ನಿಖಿಲ್​ ಕುಮಾರ್​ ಅವರು ಚಿತ್ರರಂಗ ಮತ್ತು ರಾಜಕೀಯ ಎರಡಲ್ಲೂ ಬ್ಯುಸಿಯಾಗಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಕೆಲಸ ಎರಡಲ್ಲೂ ಅವರು ತೊಡಗಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಿಖಿಲ್​ ಕುಮಾರ್​ ಅವರು ಕಬಡ್ಡಿ ಆಡಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​​ ಆಗುತ್ತಿದೆ. ನಿಖಿಲ್​ ಅವರು ಸಾಮಾನ್ಯರ ಜತೆ ಸಾಮಾನ್ಯರಂತೆ ಬೆರೆಯುತ್ತಾರೆ. ಇದಕ್ಕೆ ಹೊಸ ಸಾಕ್ಷ್ಯವೊಂದು ಸಿಕ್ಕಿದೆ. ಮಂಡ್ಯದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ನಿಖಿಲ್ ಭಾಗಿಯಾಗಿದ್ದರು. ಆಟಗಾರರ ಎದುರು ಅವರು ತೊಡೆತಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದೆ.

‘ಸೀತಾರಾಮ ಕಲ್ಯಾಣ’ ತೆರೆಗೆ ಬಂದ ನಂತರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಅವರು ಒಪ್ಪಿಕೊಂಡಿದ್ದ ‘ರೈಡರ್​’ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಕೊವಿಡ್​ ಮುಗಿದು ಚಿತ್ರಮಂದಿರಗಳು ಓಪನ್​ ಆಗಿವೆ. ಜನರು ಮತ್ತೆ ಥಿಯೇಟರ್​ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸಾಲುಸಾಲು ಸಿನಿಮಾಗಳು ರಿಲೀಸ್​ ಆಗುತ್ತಿವೆ. ನಿಖಿಲ್​ ಕುಮಾರ್​ ನಟನೆಯ ‘ರೈಡರ್​’ ಕೂಡ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ಕ್ರಿಸ್​ಮಸ್​ ನಿಮಿತ್ತ ಸಿನಿಮಾ ಡಿಸೆಂಬರ್​ 24ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಘೋಷಣೆ ಆಯ್ತು ನಿಖಿಲ್​ ಕುಮಾರ್​ ಸಿನಿಮಾ ರಿಲೀಸ್​ ದಿನಾಂಕ; ಡಿಸೆಂಬರ್​ನಲ್ಲಿ ಬರಲಿದ್ದಾನೆ ‘ರೈಡರ್’

Follow us on

Click on your DTH Provider to Add TV9 Kannada