ಘೋಷಣೆ ಆಯ್ತು ನಿಖಿಲ್​ ಕುಮಾರ್​ ಸಿನಿಮಾ ರಿಲೀಸ್​ ದಿನಾಂಕ; ಡಿಸೆಂಬರ್​ನಲ್ಲಿ ಬರಲಿದ್ದಾನೆ ‘ರೈಡರ್’

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್​ ತಿಂಗಳಲ್ಲೇ ‘ರೈಡರ್​’ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ.

ಘೋಷಣೆ ಆಯ್ತು ನಿಖಿಲ್​ ಕುಮಾರ್​ ಸಿನಿಮಾ ರಿಲೀಸ್​ ದಿನಾಂಕ; ಡಿಸೆಂಬರ್​ನಲ್ಲಿ ಬರಲಿದ್ದಾನೆ ‘ರೈಡರ್’
ನಿಖಿಲ್​ ಕುಮಾರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 22, 2021 | 8:53 PM

‘ಸೀತಾರಾಮ ಕಲ್ಯಾಣ’ ತೆರೆಗೆ ಬಂದ ನಂತರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಅವರು ಒಪ್ಪಿಕೊಂಡಿದ್ದ ‘ರೈಡರ್​’ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಕೊವಿಡ್​ ಮುಗಿದು ಚಿತ್ರಮಂದಿರಗಳು ಓಪನ್​ ಆಗಿವೆ. ಜನರು ಮತ್ತೆ ಥಿಯೇಟರ್​ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸಾಲುಸಾಲು ಸಿನಿಮಾಗಳು ರಿಲೀಸ್​ ಆಗುತ್ತಿವೆ. ನಿಖಿಲ್​ ಕುಮಾರ್​ ನಟನೆಯ ‘ರೈಡರ್​’ ಕೂಡ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ಕ್ರಿಸ್​ಮಸ್​ ನಿಮಿತ್ತ ಸಿನಿಮಾ ಡಿಸೆಂಬರ್​ 24ರಂದು ತೆರೆಗೆ ಬರುತ್ತಿದೆ.

ವಿಜಯ್​ ಕುಮಾರ್​ ಕೊಂಡ ಅವರು ‘ರೈಡರ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್​​ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್​ ತಿಂಗಳಲ್ಲೇ ‘ರೈಡರ್​’ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ನಟಿ ಕಾಶ್ಮೀರಿ ಪರ್ದೇಸಿ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ‘ಡವ ಡವಢ..’ ಸಿನಿಮಾದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಜನ ಮನ್ನಣೆ ಪಡೆದುಕೊಂಡಿತ್ತು.

‘ರೈಡರ್​’ ಸಿನಿಮಾ ದೊಡ್ಡ ಸ್ಪರ್ಧೆ ಎದುರಿಸಲಿದೆ. ಡಿಸೆಂಬರ್​ ತಿಂಗಳಲ್ಲಿ ದೊಡ್ಡ ಬಜೆಟ್​ನ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಜನವರಿಯಲ್ಲೂ ಹಲವು ಚಿತ್ರಗಳು ರಿಲೀಸ್​ ಆಗುತ್ತಿವೆ. ‘ಪುಷ್ಪ’, ‘ಆರ್​ಆರ್​ಆರ್​’, ‘ರಾಧೆ ಶ್ಯಾಮ್​’, ‘ಸರ್ಕಾರಿ ವಾರು ಪಾಟ’ ಚಿತ್ರಗಳು ‘ರೈಡರ್​’ ಸಿನಿಮಾದ ಆಸುಪಾಸಿನ ಡೇಟ್​ನಲ್ಲಿಯೇ ತೆರೆಗೆ ಬರುತ್ತಿವೆ. ಈ ಮೂಲಕ ನಿಖಿಲ್​ ಸಿನಿಮಾ ದೊಡ್ಡ ಸಿನಿಮಾಗಳ ಜತೆ ಸ್ಪರ್ಧೆಗೆ ಇಳಿದಿದೆ.

ಇದನ್ನೂ ಓದಿ: Rider Movie: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್

ಮತ್ತೆ ಮಾಸ್​​​ ಲುಕ್​ನಲ್ಲಿ ಕಾಣಿಸಿಕೊಂಡ ನಿಖಿಲ್: ಜನ್ಮದಿನಕ್ಕೆ ರಿಲೀಸ್​ ಆಯ್ತು ರೈಡರ್​ ಟೀಸರ್

Published On - 8:51 pm, Mon, 22 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ