ಮತ್ತೆ ಮಾಸ್​​​ ಲುಕ್​ನಲ್ಲಿ ಕಾಣಿಸಿಕೊಂಡ ನಿಖಿಲ್: ಜನ್ಮದಿನಕ್ಕೆ ರಿಲೀಸ್​ ಆಯ್ತು ರೈಡರ್​ ಟೀಸರ್

45 ಸೆಕೆಂಡ್​ಗಳ ಟೀಸರ್​ನಲ್ಲಿ ನಿಖಿಲ್​ ಕುಮಾರಸ್ವಾಮಿ ಸಖತ್​ ಆ್ಯಕ್ಷನ್​ ಮೂಲಕ ಕಾಣಿಸಿಕೊಂಡಿದ್ದಾರೆ. ಟೀಸರ್​ ಮೂಲಕ ಸಿನಿಮಾ ಹೇಗಿರಲಿದೆ ಎನ್ನುವ ಸಣ್ಣ ಝಲಕ್​ ನೀಡಿದ್ದಾರೆ ನಿರ್ದೇಶಕ ವಿಜಯ್​ ಕುಮಾರ್​​ ಕೊಂಡಾ.

  • TV9 Web Team
  • Published On - 14:51 PM, 22 Jan 2021
ಮತ್ತೆ ಮಾಸ್​​​ ಲುಕ್​ನಲ್ಲಿ ಕಾಣಿಸಿಕೊಂಡ ನಿಖಿಲ್: ಜನ್ಮದಿನಕ್ಕೆ ರಿಲೀಸ್​ ಆಯ್ತು ರೈಡರ್​ ಟೀಸರ್
ನಿಖಿಲ್​ ಕುಮಾರಸ್ವಾಮಿ

ಜಾಗ್ವಾರ್​ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾ ನಂತರ ನಿಖಿಲ್​ ಕುಮಾರ್​ಸ್ವಾಮಿ ಮತ್ತೊಮ್ಮೆ ಮಾಸ್​​ ಲುಕ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ರೈಡರ್​ ಸಿನಿಮಾದ ಟೀಸರ್ ತೆರೆಕಂಡಿದ್ದು, ಅಭಿಮಾನಿಗಳಿಗೆ ಮತ್ತೊಮ್ಮೆ ಆ್ಯಕ್ಷನ್​​ ದೃಶ್ಯಗಳ ರಸದೌತಣ ಸಿಕ್ಕಿದೆ.

45 ಸೆಕೆಂಡ್​ಗಳ ಟೀಸರ್​ನಲ್ಲಿ ನಿಖಿಲ್​ ಕುಮಾರಸ್ವಾಮಿ ಸಖತ್​ ಆ್ಯಕ್ಷನ್​ ಮೂಲಕ ಕಾಣಿಸಿಕೊಂಡಿದ್ದಾರೆ. ಟೀಸರ್​ ಮೂಲಕ ಸಿನಿಮಾ ಹೇಗಿರಲಿದೆ ಎನ್ನುವ ಸಣ್ಣ ಝಲಕ್​ ನೀಡಿದ್ದಾರೆ ನಿರ್ದೇಶಕ ವಿಜಯ್​ ಕುಮಾರ್​​ ಕೊಂಡಾ. ಈ ಸಿನಿಮಾಗೆ ರವಿ ವರ್ಮಾ ಸ್ಟಂಟ್​ ಡೈರೆಕ್ಷನ್​ ಮಾಡಿದ್ದಾರೆ. ಈ ಕಾರಣಕ್ಕೆ ಆ್ಯಕ್ಷನ್​ ದೃಶ್ಯಗಳು ಕಣ್ಣಿಗೆ ರಸದೌತಣ ನೀಡುತ್ತವೆ.

ನಿಖಿಲ್​ ಕುಮಾರ್​ಸ್ವಾಮಿ ಇಂದು 31ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಅವರು ಸರಳವಾಗಿ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ.ನಿಖಿಲ್​ ಹುಟ್ಟು ಹಬ್ಬಕ್ಕೆ ಬಗೆಗೆ ಬಗೆಯ ಗಿಫ್ಟ್​ ಹಾಗೂ ಕೇಕ್​ಗಳನ್ನು ತಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಕ್ತದಾನ, ಅನ್ನದಾನ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ