ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​ಫೋನ್ ಲಾಂಚ್ ಆಗುವ ಮೊದಲೇ ಅದರ ವಿಶೇಷತೆಗಳ ಬಗ್ಗೆ ಸುಳಿವು ಸಿಕ್ಕಿದೆ

ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​ಫೋನ್ ಲಾಂಚ್ ಆಗುವ ಮೊದಲೇ ಅದರ ವಿಶೇಷತೆಗಳ ಬಗ್ಗೆ ಸುಳಿವು ಸಿಕ್ಕಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 29, 2021 | 5:33 PM

ಗೂಗಲ್ ಕೆಮೆರಾ ಆ್ಯಪ್​​​ನಲ್ಲಿ ಐ ಎ ಎಕ್ಸ್ ಮೇನ್ ಕೆಮೆರಾ ಸೆನ್ಸಾರ್ ಸಂಬಂಧಿಸಿದ ಕೋಡ್ ಲಭ್ಯವಿದ್ದು ಅದರಲ್ಲಿ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್ ಪೋನಿನ ವೈಶಿಷ್ಟ್ಯತೆಗಳನ್ನು ಕಂಡುಕೊಳ್ಳಬಹದಾಗಿದೆ.

ಗೂಗಲ್ ತನ್ನ ಪಿಕ್ಸೆಲ್ 6 ಸರಣಿ ಫೋನ್ ಈ ವರ್ಷ ಲಾಂಚ್ ಮಾಡಿದ್ದು ನಿಮಗೆ ಗೊತ್ತಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಂಪನಿಯು ಗೂಗಲ್ ಪಿಕ್ಸೆಲ್ 6ಎ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ವರದಿಯೊಂದರ ಪ್ರಕಾರ ಹೊಸ ಫೋನಲ್ಲಿ ಪಿಕ್ಸೆಲ್ 6 ಫೋನಿನ ಎಲ್ಲ ವಿಶೇಷತೆಗಳು ಇರುತ್ತವಾದರೂ ಒಂದು ಪ್ರಮುಖ ಫೀಚರ್ ಅನ್ನು ಕೈಬಿಡಬಹುದೆಂದು ಹೇಳಲಾಗುತ್ತಿದೆ. 9ಟು5ಗೂಗಲ್ ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್ ಫೋನಲ್ಲಿ 12.2 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಐ ಎ ಎಕ್ಸ್ ಮೇನ್ ಕೆಮೆರಾ ಸೆನ್ಸಾರ್ ಇದೆ. ಇದನ್ನೇ ಕಂಪನಿಯು ಪಿಕ್ಸೆಲ್ 3 ಫೋನಲ್ಲೂ ಬಳಸಿದೆ.

ಗೂಗಲ್ ಕೆಮೆರಾ ಆ್ಯಪ್​​​ನಲ್ಲಿ ಐ ಎ ಎಕ್ಸ್ ಮೇನ್ ಕೆಮೆರಾ ಸೆನ್ಸಾರ್ ಸಂಬಂಧಿಸಿದ ಕೋಡ್ ಲಭ್ಯವಿದ್ದು ಅದರಲ್ಲಿ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್ ಪೋನಿನ ವೈಶಿಷ್ಟ್ಯತೆಗಳನ್ನು ಕಂಡುಕೊಳ್ಳಬಹದಾಗಿದೆ.

ಗೂಗಲ್ ಪಿಕ್ಸೆಲ್ 6ಎ ಫೋನು 12.2 ಮೆಗಾ ಪಿಕ್ಸೆಲ್ ಸೋನಿ ಐ ಎಮ್ ಎಕ್ಸ್ 363 ಪ್ರೈಮರಿ ಕೆಮೆರಾ ಜೊತೆಗೆ 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕೆಮೆರಾ ಮತ್ತು 8 ಎಮ್ ಪಿ ಸೆಲ್ಫೀ ಶೂಟರ್ ಇದೆ.

ನಮಗೆಲ್ಲ ಗೊತ್ತಿರುವ ಹಾಗೆ ಹಿಂದೆ ಪಿಕ್ಸೆಲ್ ಡಿವೈಸ್ಗಳಲ್ಲಿ ಅತ್ಯಾಧುನಿಕ ಮತ್ತು ಅದ್ಭುತವಾದ ಕೆಮೆರಾ ಸೆನ್ಸಾರ್ಗಳನ್ನು ಬಳಸಿರಲಿಲ್ಲ. ಆದರೆ ಈ ಸ್ಮಾರ್ಟ್ ಫೋನ್ಗಳು ಹಾರ್ಡ್ವೇರ್ ನಲ್ಲಿ ಲಭ್ಯವಿಲ್ಲದಿರುವುದನ್ನು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಾಫ್ಟ್ ವೇರ್​ಗಳ ಮೂಲಕ ನೀಗಿಸಿಕೊಳ್ಳುತ್ತವೆ.

ಇದನ್ನೂ ಓದಿ:  Shocking Video: ಪ್ಲಾಸ್ಟಿಕ್ ಮೊಸಳೆ ಎಂದು ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಆಗಿದ್ದೆ ಬೇರೆ! ಭಯಾನಕ ವಿಡಿಯೋ ನೋಡಿ