ಸಂಚಾರ ನಿಯಮ ಉಲ್ಲಂಘಿಸಿದ ದಂಡಗಳ ಅರ್ಧದಷ್ಟು ಮಾತ್ರ ಪಾವತಿಸಿ ಬಾಕಿ ಚುಕ್ತಾ ಮಾಡಿಕೊಳ್ಳಲು ಅವಕಾಶ ನೀಡಿದ ಸಂಚಾರಿ ಪೊಲೀಸ್ ಇಲಾಖೆ
ಆ ಮೊತ್ತವನ್ನು ಪಾವತಿಸಲು ಪೇಟಿಮ್, ಕರ್ನಾಟಕ ವನ್ ಮೊದಲಾದವು ಸೇರಿದಂತೆ ಹಲವಾರು ವಿಧಾನಗಳನ್ನು ಬಳಸಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಬೆಂಗಳೂರು: ಸಂಚಾರ ನಿಯಮ ಪದೇಪದೆ ಉಲ್ಲಂಘಿಸಿ ಸಂಚಾರಿ ಪೊಲೀಸ್ ಇಲಾಖೆ (traffic police department) ವಿಧಿಸಿದ ದಂಡವನ್ನು ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಅದನ್ನು ಚುಕ್ತಾ ಮಾಡಿಕೊಳ್ಳಲು ಇಲಾಖೆ ಒಂದು ಸದವಕಾಶವನ್ನು ನೀಡಿದೆ. ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತಾಡಿದ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಮ್ ಎ ಸಲೀಂ (MA Saleem) ಅವರು, ಸಂಚಾರ ನಿಯಮ ಉಲ್ಲಂಘಿಸಿ (traffic rules violations) ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರು ಈಗ ಒಟ್ಟು ಪೆನಾಲ್ಟಿಯ ಶೇಕಡ 50 ರಷ್ಟು ಮಾತ್ರ ಕಟ್ಟಿ ಅದನ್ನು ಚುಕ್ತಾ ಮಾಡಿಕೊಳ್ಳಬಹುದು ಎಂದು ಹೇಳಿದರು. ಅದಕ್ಕನುಗುಣವಾಗಿಯೇ, ಎಲ್ಲ ವಾಹನಗಳ ಮೇಲಿದ್ದ ದಂಡಗಳ ಮೊತ್ತವನ್ನು ಸಿಸ್ಟಮ್ ಮೂಲಕ ಅಪ್ ಗ್ರೇಡ್ ಮಾಡಲಾಗಿದೆ. ವಾಹನಗಳ ಮಾಲಿಕರು ತಾವು ಕಟ್ಟಬೇಕಿರುವ ದಂಡವನ್ನು ಆನ್ಲೈನಲ್ಲಿ ಚೆಕ್ ಮಾಡಿದರೆ ಶೇಕಡ 50 ರಷ್ಟು ಕಡಿತಗೊಂಡ ಮೊತ್ತವೇ ಡಿಸ್ಪ್ಲೇಯಾಗುತ್ತದೆ. ಆ ಮೊತ್ತವನ್ನು ಪಾವತಿಸಲು ಪೇಟಿಮ್, ಕರ್ನಾಟಕ ವನ್ ಮೊದಲಾದವು ಸೇರಿದಂತೆ ಹಲವಾರು ವಿಧಾನಗಳನ್ನು ಬಳಸಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ