Assembly polls: ಚುನಾವಣೆ ನೆತ್ತಿ ಮೇಲಿರುವಾಗ ಒಡೆದ ಮನೆಯಂತಾಗಿರುವ ಕರ್ನಾಟಕ ಕಾಂಗ್ರೆಸ್!

Assembly polls: ಚುನಾವಣೆ ನೆತ್ತಿ ಮೇಲಿರುವಾಗ ಒಡೆದ ಮನೆಯಂತಾಗಿರುವ ಕರ್ನಾಟಕ ಕಾಂಗ್ರೆಸ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 03, 2023 | 7:05 PM

ವಿಷಯ ಗೊತ್ತಾದ ಕೂಡಲೇ ರಾಜ್ಯ ಕಾಂಗ್ರೆಸ್ ನಾಯಕರ ಪ್ರತಿಷ್ಠೆ, ಅಹಂಗಳ ನಡುವೆ ಸಿಕ್ಕು ಒದ್ದಾಡುತ್ತಿರುವ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಪರಮೇಶ್ವರ್ ಅವರನ್ನು ಕರೆಸಿಕೊಂಡು ಸಮಾಧಾನಪಡಿಸಿದ್ದಾರಂತೆ.

ಬೆಂಗಳೂರು:  ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಬಿಕೆ ಹರಿಪ್ರಸಾದ್ ಇನ್ನೂ ಹಲವಾರು ಪ್ರಮುಖ ನಾಯಕರು ಹೋದೆಡೆಯಲ್ಲೆಲ್ಲ ನಾವೇ ಈ ಸಲ ಅಧಿಕಾರಕ್ಕೆ ಬರೋದು ಅಂತ ಹೇಳುತ್ತಾರೆ. ಆದರೆ ಪಕ್ಷದ ಅಗ್ರಪಂಕ್ತಿಯ ನಾಯಕರ ನಡುವೆಯೇ ಹೊಂದಾಣಿಕೆ, ಸಹಮತ ಮತ್ತು ಒಮ್ಮತ ಇಲ್ಲದಿರುವುದು ಜನರ ಗಮನಕ್ಕೆ ಬರುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ (G Parmeshwar) ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿಯ (manifesto committee) ಮುಖ್ಯಸ್ಥರಾಗಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೋದಲ್ಲಿ ಬಂದಲ್ಲಿ ಪ್ರಣಾಳಿಕೆ ಅಂಶಗಳನ್ನು ಘೋಷಿಸುತ್ತಿರುವುದು ಪರಮೇಶ್ವರ್ ಅವರು ಪಿತ್ತ ನೆತ್ತಗೇರುವಂತೆ ಮಾಡಿದ್ದು ಅವರು ನೇರವಾಗಿಯೇ ಶಿವಕುಮಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಷಯ ಗೊತ್ತಾದ ಕೂಡಲೇ ರಾಜ್ಯ ಕಾಂಗ್ರೆಸ್ ನಾಯಕರ ಪ್ರತಿಷ್ಠೆ, ಅಹಂಗಳ ನಡುವೆ ಸಿಕ್ಕು ಒದ್ದಾಡುತ್ತಿರುವ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಪರಮೇಶ್ವರ್ ಅವರನ್ನು ಕರೆಸಿಕೊಂಡು ಸಮಾಧಾನಪಡಿಸಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ