ಹೊಸ ವರ್ಷ ಸಂಭ್ರಮಾಚರಣೆ: ಐತಿಹಾಸಿಕ ಹಂಪಿಯಲ್ಲಿ ವಾಹನದಟ್ಟಣೆ, ಪ್ರವಾಸಿಗರ ಅಸಮಾಧಾನ

|

Updated on: Dec 31, 2024 | 1:35 PM

ಐತಿಹಾಸಿಕ ಸ್ಥಳ ಹಂಪಿಯಲ್ಲಿ ವಾತಾವರಣ ಅತ್ಯಂತ ಆಹ್ಲಾದಕರವಾಗಿದೆ. ಆಗಾಗ ತುಂತುರು ಮಳೆಯಾಗುತ್ತಿದೆ ಮತ್ತು ಸೂರ್ಯ ಮೋಡಗಳ ಮಧ್ಯೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ಹೊಸ ವರ್ಷದ ಸ್ವಾಗತಕ್ಕೆ ಹಂಪಿಯಥ ಸುಂದರ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವವರು ನಿಜಕ್ಕೂ ಧನ್ಯರು. ನಗರದ ಪ್ರದೇಶಗಳ ರಸ್ತೆ, ಬಾರ್ ಮತ್ತು ಪಬ್ ಗಳಲ್ಲಿ 2025 ಅನ್ನು ಸ್ವಾಗತಿಸುವ ಬದಲು ಹಂಪಿಯಲ್ಲಿ ಆಚರಿಸುವುದು ಎಷ್ಟೋ ಮೇಲು.

ವಿಜಯನಗರ: ಹೊಸ ವರ್ಷದಾಚರಣೆಗೆ ಅಂತ ಜನ ಜಿಲ್ಲೆಯ ಹಂಪಿಗೂ ಬರುತ್ತಾರೆನ್ನುವುದು ಹೊಸ ಸಂಗತಿಯೇನಲ್ಲ, ಆದರೆ ಪೊಲೀಸರಿಗೆ ಇದು ಪ್ರಾಯಶಃ ಗೊತ್ತಿರದ ವಿಷಯ. ಇಲ್ಲಿಗೆ ಆಗಮಿಸಿರುವ ಎಲ್ಲ ಟೂರಿಸ್ಟ್ ಗಳು ವಾಹನಗಳ ಟ್ರಾಫಿಕ್ ಬಗ್ಗೆ ದೂರುತ್ತಿದ್ದಾರೆ. ಈ ವಿಡಿಯೋದಲ್ಲಿ ರಸ್ತೆಯ ಮೇಲೆ ಕಿಕ್ಕಿರಿದು ನೆರೆದಿರುವ ಮತ್ತು ಅಮೆಗತಿಯಲ್ಲಿ ಸಾಗುತ್ತಿರುವ ವಾಹನಗಳ ದೃಶ್ಯಗಳಿವೆ. ಹಂಪಿಯನ್ನು ತಲುಪಲು ಜನ ಹರಸಾಹಸ ಪಡುತ್ತಿದ್ದಾರೆ. ವರ್ಷಾಂತ್ಯದ ಆಚರಣೆಗೆ ಜನ ಬರುತ್ತಾರೆಂದು ಗೊತ್ತಿದ್ದೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವ್ಯವಸ್ಥೆ ವಾಹನಗಳ ಸುಗಮ ಸಂಚಾರಕ್ಕೆ ಏರ್ಪಾಟುಗಳನ್ನು ಮಾಡದಿರುವುದು ಖೇದಕರ ವಿಷಯವಲ್ಲದೆ ಮತ್ತೇನೂ ಅಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಜಿಲ್ಲೆಯಲ್ಲೇ ಇದ್ದರೋ ಅಥವಾ ಬೆಂಗಳೂರಲ್ಲಿದ್ದಾರೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೊಸ ವರ್ಷ ಸ್ವಾಗತಕ್ಕೆ ಎಲ್ಲೆಲ್ಲೂ ಸಜ್ಜು: ಯಾವೆಲ್ಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ? ಇಲ್ಲಿದೆ ಮಾಹಿತಿ