Sign In

By signing in or creating an account, you agree with Associated Broadcasting Company's Terms & Conditions and Privacy Policy.

Transport minister; ಬೆಂಗಳೂರು ಶಾಸಕರು, ಸಚಿವರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡಿದ್ದಾರೆ: ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

Transport minister; ಬೆಂಗಳೂರು ಶಾಸಕರು, ಸಚಿವರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡಿದ್ದಾರೆ: ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2023 | 6:44 PM

ಚಾಲಕ ಅಜಾರೂಕತೆಯಿಂದ ಡ್ರೈವ್ ಮಾಡುತ್ತಿದ್ದ ಅನ್ನೋದು ಸಿದ್ಧಪಟ್ಟರೆ ಕ್ರಮ ಜರುಗಿಸುವಂತೆ ಸಂಸ್ಥೆಯ ಎಮ್ ಡಿ ವಿ ಅನ್ಬುಕುಮಾರ್ ಗೆ ತಿಳಿಸಲಾಗಿದೆ ಎಂದು ಸಚಿವ ಹೇಳಿದರು.

ಬೆಂಗಳೂರು: ಇಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ ಶಾಸಕರು, ಸಂಸದರು ಮಳೆಗಾಲ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು. ಸಭೆಗೆ ಹಾಜರಾಗದ ಬಿಜೆಪಿ ಶಾಸಕರ (BJP MLAs) ಬಗ್ಗೆ ಮಾತಾಡಿದ ರೆಡ್ಡಿ, 2-3 ಶಾಸಕರು ಮಾತ್ರ ಹಾಜರಾಗಿರಲಿಲ್ಲ ಅವರಿಗೆ ಬೇರೆ ಕೆಲಸವಿದ್ದರಬೇಕು, ಆದರೆ ಉಳಿದವರೆಲ್ಲ ಹಾಜರಿದ್ದರು ಎಂದರು. ನಿನ್ನೆ ಕೆಎಸ್ ಆರ್ ಟಿ ಸಿ ಚಾಲಕನೊಬ್ಬನ ಅಪಾಯಕಾರಿ ಡ್ರೈವಿಂಗ್ ನಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿರುವುದಾಗಿ ಹೇಳಿದ ಸಚಿವರು, ಚಾಲಕ ಅಜಾರೂಕತೆಯಿಂದ ಡ್ರೈವ್ ಮಾಡುತ್ತಿದ್ದ ಅನ್ನೋದು ಸಿದ್ಧಪಟ್ಟರೆ ಅವನ ವಿರುದ್ಧ ಕ್ರಮ ಜರುಗಿಸುವಂತೆ ಸಂಸ್ಥೆಯ ಎಮ್ ಡಿ ವಿ ಅನ್ಬುಕುಮಾರ್ ಅವರಿಗೆ ತಿಳಿಸಲಾಗಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ