ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?
ಬಿಗ್ ಬಾಸ್ನಲ್ಲಿ ಜಗಳಗಳು ಇದ್ದರೂ ಕೂಡ ಪ್ರೀತಿಗೂ ಜಾಗವಿದೆ. ಐಶ್ವರ್ಯಾ, ಧರ್ಮ ಕೀರ್ತಿರಾಜ್, ಅನುಷಾ ರೈ ನಡುವೆ ಪ್ರೀತಿಯ ಮಾತುಕಥೆ ಆರಂಭ ಆಗಿದೆ. ದೊಡ್ಮನೆಯೊಳಗೂ ‘ಕಣ್ ಕಣ್ಣ ಸಲಿಗೆ..’ ಶುರುವಾಗಿದೆ. ಲವರ್ಬಾಯ್ ಇಮೇಜ್ ಇರುವ ಧರ್ಮ ಅವರು ರಿಯಲ್ ಲೈಫ್ನಲ್ಲಿ ಸಿಂಗಲ್. ದೊಡ್ಮನೆಯಲ್ಲಿ ಅವರಿಗೆ ಪ್ರೀತಿ ಚಿಗುರೊಡೆಯುವ ಸೂಚನೆ ಸಿಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಪ್ರೀತಿ-ಪ್ರೇಮ ಚಿಗುರುವ ಲಕ್ಷಣ ಕಾಣಿಸಿದೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ನಡುವೆ ಲವ್ ಆಗಿತ್ತು. ಈಗ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಅವರು ಪರಸ್ಪರ ಆಕರ್ಷಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನುಷಾ ರೈ ಕೂಡ ಇದೇ ಟ್ರ್ಯಾಕ್ನಲ್ಲಿ ಇದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ತ್ರಿಕೋನ ಪ್ರೇಮ ಶುರುವಾಗುವ ಸೂಚನೆ ಸಿಕ್ಕಿದೆ. ಈ ಪ್ರೋಮೋದಲ್ಲಿ ಅದರ ಝಲಕ್ ಕಾಣಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.