ಏಪ್ರಿಲ್​ 1ರ ಬದಲು ಏಪ್ರಿಲ್ 8ಕ್ಕೆ ‘ತ್ರಿಕೋನ’ ಸಿನಿಮಾ; ಚಿತ್ರದ ಬಗ್ಗೆ ಸುಚೇಂದ್ರ ಪ್ರಸಾದ್ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Mar 31, 2022 | 3:52 PM

‘ಜೇಮ್ಸ್​' ಚಿತ್ರವು ಎಲ್ಲೆಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಪೈಕಿ ಕೆಲವು ಚಿತ್ರಮಂದಿರಗಳನ್ನು ‘ತ್ರಿಕೋನ’ ಚಿತ್ರಕ್ಕೆ ಕೊಡಿಸುವುದಾಗಿ ವಿತರಕರು ಹೇಳಿದ್ದರು. ಆದರೆ, ಇದಕ್ಕೆ ಚಿತ್ರತಂಡದವರ ಮನಸ್ಸು ಒಪ್ಪಿಲ್ಲ.

ಏ.1ರಂದು ತೆರೆಗೆ ಬರಬೇಕಿದ್ದ ‘ತ್ರಿಕೋನ’ ಸಿನಿಮಾ (Trikona Movie) ಈಗ ಏ.8ಕ್ಕೆ ತೆರೆಕಾಣುತ್ತಿದೆ. ನಿರ್ಮಾಪಕ ರಾಜಶೇಖರ್​, ಚಿತ್ರದ ಪ್ರಚಾರ ರಾಯಭಾರಿ ಸುಚೇಂದ್ರ ಪ್ರಸಾದ್​ ಮತ್ತು ನಿರ್ದೇಶಕ ಚಂದ್ರಕಾಂತ್​ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು.  ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ‘ಜೇಮ್ಸ್’ ಸಿನಿಮಾ (James Movie)ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ‘ಜೇಮ್ಸ್​’ ಚಿತ್ರವು ಎಲ್ಲೆಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಪೈಕಿ ಕೆಲವು ಚಿತ್ರಮಂದಿರಗಳನ್ನು ಈ ಚಿತ್ರಕ್ಕೆ ಕೊಡಿಸುವುದಾಗಿ ವಿತರಕರು ಹೇಳಿದ್ದರು. ಆದರೆ, ಇದಕ್ಕೆ ಚಿತ್ರತಂಡದವರ ಮನಸ್ಸು ಒಪ್ಪಿಲ್ಲ. ಜತೆಗೆ ಏಪ್ರಿಲ್​ 1ರಂದು ಸಾಕಷ್ಟು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಹೀಗಾಗಿ, ಸಿನಿಮಾವನ್ನು ಏಪ್ರಿಲ್​ 8ಕ್ಕೆ ರಿಲೀಸ್ ಮಾಡಲಾಗುತ್ತಿದೆ. ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರೀ-ರಿಲೀಸ್​ ಆಗ್ತಿದೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ; ಈ ಆಫರ್​ ಸಿಗೋದು ಕೆಲವೇ ದಿನಗಳು ಮಾತ್ರ 

KGF Chapter 2: ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಕೆಜಿಎಫ್​ ಚಾಪ್ಟರ್​ 2’; ಚಿತ್ರದ ಅವಧಿ ಎಷ್ಟು?

Published on: Mar 31, 2022 03:47 PM