[lazy-load-videos-and-sticky-control id=”r24-RggcwI0″]
ಕೊಡಗು:ಮಡಿಕೇರಿಯ ಬ್ರಹ್ಮಗಿರಿ ತಪ್ಪಲಿನ ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿದ್ದ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದೆ.
ಗುಡ್ಡ ಕುಸಿದು 6 ದಿನಗಳ ನಂತರ ರಕ್ಷಣಾ ಸಿಬ್ಬಂದಿಯ ತೀವ್ರ ಹುಡುಕಾಟದ ನಂತರ ಇಂದು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ರವರ ಮೃತದೇಹ ಮಣ್ಣು ಬಿದ್ದ ಕಂದಕದೊಳಗೆ ಪತ್ತೆಯಾಗಿದೆ. ಕಂದಕದಿಂದ ಮೃತದೇಹವನ್ನು ರಕ್ಷಣಾ ಸಿಬ್ಬಂದಿಗಳು ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಮೃತದೇಹ ಸಿಕ್ಕ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ನಿರಂತರ ಕಾರ್ಯಾಚರಣೆ ಬಳಿಕ ಮೃತದೇಹ ಸಿಕ್ಕ ಸ್ಥಳದಲ್ಲಿಯೇ ಕಾರು, ಸ್ಕೂಟರ್, ಹಣ, ಪೂಜಾ ಸಾಮಾಗ್ರಿಗಳು ಕೂಡಾ ದೊರೆತಿದೆ. ಹೀಗಾಗಿ ಇದೇ ಪ್ರದೇಶದಲ್ಲಿ ಉಳಿದ ದೇಹಗಳಿಗಾಗಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಉಸ್ತುವಾರಿ ಸಚಿವ ಸೋಮಣ್ಣ ಟಿವಿ9 ಗೆ ತಿಳಿಸಿದ್ದಾರೆ.
ನಾರಾಯಣ ಆಚಾರ್ರವರ ಮೃತದೇಹ ಸಿಕ್ಕ ಹಿನ್ನೆಲೆಯಿಂದಾಗಿ ಪತ್ನಿ ಹಾಗೂ ಇಬ್ಬರು ಪುರೋಹಿತರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹಾಗೂ ಕೆಲ ಹೊತ್ತಿನಲ್ಲೇ ನಾರಾಯಣಾಚಾರ್ರವರ ಮೃತದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಿದ್ದು ಇಂದು ಅಥವಾ ನಾಳೆ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Published On - 3:39 pm, Tue, 11 August 20