ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

Updated on: Dec 31, 2023 | 10:40 AM

ಕಿಚ್ಚ ಸುದೀಪ್​ ಅವರ ಎದುರಲ್ಲೇ ಕಾರ್ತಿಕ್​ ಮಹೇಶ್​ಗೆ ತುಕಾಲಿ ಸಂತೋಷ್​ ಅವರು ಕಿಸ್​ ಮಾಡಿದ್ದಾರೆ. ಮನೆ ಮಂದಿಗೆಲ್ಲ ಕೀಟಲೆ ಮಾಡಿದ ತುಕಾಲಿ ಸಂತೋಷ್​ ಅವರಿಗೆ ತಕ್ಕ ಪಾಠ ಕಲಿಸಲು ಮಹಿಳಾ ಸ್ಪರ್ಧಿಗಳು ಸ್ಕೆಚ್​ ಹಾಕಿದ್ದಾರೆ. ವ್ಯಾಕ್ಸ್ ಸ್ಟ್ರಿಪ್ಸ್​ ಮೂಲಕ ಸಂತೋಷ್​ ಅವರ ಕಾಲಿನ ಕೂದಲನ್ನು ಕೀಳಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ ತುಕಾಲಿ ಸಂತೋಷ್​ (Tukali Santhosh) ಅವರು ಮನರಂಜನೆ ನೀಡುತ್ತಿದ್ದಾರೆ. ಈ ವಾರದ ಫನ್ನಿ ಟಾಸ್ಕ್​ನಲ್ಲಿ ಕಾರ್ತಿಕ್ ಮಹೇಶ್​ಗೆ ತುಕಾಲಿ ಸಂತೋಷ್​ ಅವರು ಮುತ್ತು ನೀಡಿದ್ದರು. ವೀಕೆಂಡ್​ ಎಪಿಸೋಡ್​ನಲ್ಲಿ ಆ ಸನ್ನಿವೇಶ ಮತ್ತೆ ಮರುಕಳಿಸಿದೆ. ಕಿಚ್ಚ ಸುದೀಪ್​ ಅವರ ಎದುರಲ್ಲೇ ಕಾರ್ತಿಕ್​ ಮಹೇಶ್​ಗೆ (Karthik Mahesh) ತುಕಾಲಿ ಸಂತೋಷ್​ ಅವರು ಕಿಸ್​ ಮಾಡಿದ್ದಾರೆ. ಮನೆ ಮಂದಿಗೆಲ್ಲ ಕೀಟಲೆ ಮಾಡಿದ ತುಕಾಲಿ ಸಂತೋಷ್​ ಅವರಿಗೆ ತಕ್ಕ ಪಾಠ ಕಲಿಸಲು ಮಹಿಳಾ ಸ್ಪರ್ಧಿಗಳು ಸ್ಕೆಚ್​ ಹಾಕಿದ್ದಾರೆ. ನಮ್ರತಾ ಗೌಡ (Namratha Gowda) ಮತ್ತು ಸಿರಿ ಅವರು ವ್ಯಾಕ್ಸ್ ಸ್ಟ್ರಿಪ್ಸ್​ ಮೂಲಕ ಸಂತೋಷ್​ ಅವರ ಕಾಲಿನ ಕೂದಲನ್ನು ಕಿತ್ತಿದ್ದಾರೆ. ‘ಹೋಗಿ ಬಂದು ನನ್ನ ಕೂದಲಿಗೆ ಅಟ್ಯಾಕ್​ ಮಾಡ್ತಾರೆ’ ಎಂದು ತುಕಾಲಿ ಸಂತೋಷ್​ ಗೋಳು ತೋಡಿಕೊಂಡಿದ್ದಾರೆ. ಈ ಸಂಚಿಕೆ ಡಿ.31ರ ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಪ್ರಸಾರ ಆಗಲಿದೆ. 24 ಗಂಟೆಯೂ ಫ್ರೀಯಾಗಿ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್​ ಬಾಸ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More