ಗೆಳೆಯ ವರ್ತೂರು ಸಂತು ಕೊಟ್ಟ ಉಡುಗೊರೆ ನೋಡಿ ಭಾವುಕರಾದ ತುಕಾಲಿ ಹೇಳಿದ್ದು ಹೀಗೆ

|

Updated on: Feb 04, 2024 | 10:37 PM

Santhu-Panthu: ವರ್ತೂರು ಸಂತು-ತುಕಾಲಿ ಸಂತು ಬಿಗ್​ಬಾಸ್ ಮುಗಿದ ಬಳಿಕವೂ ಗೆಳೆತನ ಮುಂದುವರೆಸಿದ್ದಾರೆ. ಗೆಳೆಯ ತುಕಾಲಿಗೆ ಚಿನ್ನದ ಪೆಂಡೆಂಟ್ ಅನ್ನು ವರ್ತೂರು ಸಂತು ನೀಡಿದ್ದಾರೆ. ಈ ಬಗ್ಗೆ ಏನು ಹೇಳಿದರು ತುಕಾಲಿ? ಇಲ್ಲಿ ನೋಡಿ.

ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ನಂಬರ್ 1 ಜೋಡಿ ಎಂದರೆ ಅದು ಸಂತು-ಪಂತು ಜೋಡಿ. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರ ಗೆಳೆತನವನ್ನು ಬಿಗ್​ಬಾಸ್ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸ್ವತಃ ಕಿಚ್ಚ ಸುದೀಪ್ ಅವರು ಸಹ ಕೊಂಡಾಡಿದ್ದರು. ಬಿಗ್​ಬಾಸ್ ಮುಗಿದ ಬಳಿಕವೂ ತಮ್ಮ ಗೆಳೆತನವನ್ನು ವರ್ತೂರು ಸಂತು ಹಾಗೂ ತುಕಾಲಿ ಸಂತು ಮುಂದುವರೆಸಿದ್ದಾರೆ. ‘ಸಂತು-ಪಂತು’ ಹೆಸರಿನ ಸಿನಿಮಾದಲ್ಲಿ ಈ ಇಬ್ಬರೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ವರ್ತೂರು ಸಂತು ಮನೆಯಲ್ಲಿ ಇಂದು ಕಾರ್ಯಕ್ರಮವೊಂದು ನಡೆದಿದ್ದು, ಕಾರ್ಯಕ್ರಮಕ್ಕೆ ಅತಿಥಿಯಾಗಿ ತುಕಾಲಿ ಸಂತು ಬಂದಿದ್ದರು. ತುಕಾಲಿ ಸಂತುಗೆ ಚಿನ್ನದ ಪೆಂಡೆಂಟ್ ಒಂದನ್ನು ವರ್ತೂರು ಸಂತು ನೀಡಿದರು. ಈ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ ತುಕಾಲಿ ಸಂತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ