ಹೇಗಿತ್ತು ತುಕಾಲಿ ಸಂತೋಷ್ ಬಿಗ್ ಬಾಸ್ ಜರ್ನಿ? ವಿಡಿಯೋ ಮೂಲಕ ತಿಳಿಸಿದ ಕಲರ್ಸ್ ಕನ್ನಡ
ಇಂದು ತುಕಾಲಿ ಸಂತೋಷ್ ಅವರ ಜನ್ಮದಿನ. ಈ ಪ್ರಯಕ್ತ ಈ ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಸಖತ್ ಫನ್ ಆಗಿದೆ.
ಸಾಮಾನ್ಯವಾಗಿ ಎಲಿಮಿನೇಟ್ ಆದ ಬಳಿಕ ಬಿಗ್ ಬಾಸ್ (Bigg Boss) ಜರ್ನಿಯ ವಿಶೇಷ ವಿಡಿಯೋ ಹಂಚಿಕೊಳ್ಳಲಾಗುತ್ತದೆ. ಕಲರ್ಸ್ ಕನ್ನಡ ವಾಹಿನಿ ಕೂಡ ತುಕಾಲಿ ಸಂತೋಷ್ ಅವರ ಜರ್ನಿ ವಿಡಿಯೋ ಹಂಚಿಕೊಂಡಿದೆ. ಹಾಗಂತ ಅವರು ಎಲಿಮಿನೇಟ್ ಆಗಿಲ್ಲ. ಇಂದು (ಜನವರಿ 15) ತುಕಾಲಿ ಸಂತೋಷ್ ಅವರ ಜನ್ಮದಿನ. ಈ ಪ್ರಯಕ್ತ ಈ ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಸಖತ್ ಫನ್ ಆಗಿದೆ. ಇಬ್ಬರು ಸಂತೋಷ್ ಇರುವುದರಿಂದ ಬಿಗ್ ಬಾಸ್ ‘ತುಕಾಲಿ ಅವರೇ’ ಎಂದು ಕರೆಯುತ್ತಿದ್ದಾರೆ. ಈ ಘಟನೆಯನ್ನು ಕೂಡ ನೆನಪಿಸಿಕೊಳ್ಳಲಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಪ್ರದರ್ಶನ ಕಾಣುತ್ತಿದೆ. ಕಳೆದ ವೀಕೆಂಡ್ನಲ್ಲಿ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಎಲಿಮಿನೇಷನ್ನಿಂದ ಬಚಾವ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ