ಕಾರು ಅಪಘಾತದ ಬಳಿಕ ಮಾತನಾಡಿದ ತುಕಾಲಿ ಸಂತೋಷ್

Updated on: Mar 14, 2024 | 8:34 AM

ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿದ್ದರು. ಕಿಯಾ ಕಾರು ಖರೀದಿ ಮಾಡಿ ಸಂಭ್ರಮಿಸಿದ್ದರು. ಆದರೆ, ಈ ಕಾರು ಈಗ ಅಪಘಾತಕ್ಕೆ ಒಳಗಾಗಿದೆ. ಕಾರಿಗೆ ಹಾನಿ ಆಗಿದೆ. ಅದೇ ರೀತಿ ಆಟೋ ನಜ್ಜುಗುಜ್ಜಾಗಿದೆ. ಅಪಘಾತದ ಬಗ್ಗೆ ತುಕಾಲಿ ಸಂತೋಷ್ ಮಾತನಾಡಿದ್ದಾರೆ.

ತುಕಾಲಿ ಸಂತೋಷ್ (Tukali Santhosh) ಅವರು ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿದ್ದರು. ಕಿಯಾ ಕಾರು ಖರೀದಿ ಮಾಡಿ ಸಂಭ್ರಮಿಸಿದ್ದರು. ಆದರೆ, ಈ ಕಾರು ಈಗ ಅಪಘಾತಕ್ಕೆ ಒಳಗಾಗಿದೆ. ಕಾರಿಗೆ ಹಾನಿ ಆಗಿದೆ. ಅದೇ ರೀತಿ ಆಟೋ ನಜ್ಜುಗುಜ್ಜಾಗಿದೆ. ಅಪಘಾತದ ಬಗ್ಗೆ ತುಕಾಲಿ ಸಂತೋಷ್ ಮಾತನಾಡಿದ್ದಾರೆ. ‘ನಾನು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ನನ್ನ ಊರು ಹೊಳೆನರಸೀಪುರ ಕಡೆ ಹೋಗುತ್ತಿದ್ದೆ. ಈ ವೇಳೆ ಅಪಘಾತ ಸಂಭವಿಸಿದೆ’ ಎಂದಿದ್ದಾರೆ ಅವರು. ಆಟೋ ಚಾಲಕನನ್ನು ಜಗದೀಶ್​ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಯಾರದ್ದು ತಪ್ಪು ಎನ್ನುವ ವಿಚಾರ ಇನ್ನಷ್ಟೇ ಗೊತ್ತಾಗಬೇಕಿದೆ. ಇತ್ತೀಚೆಗೆ ತುಕಾಲಿ ಸಂತೋಷ್ ಕಾರು ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 14, 2024 08:22 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More