ರೌಡಿಶೀಟರ್ ಉಪನಾಮದಿಂದ ಮುಕ್ತಿ, ತುಮಕೂರು ವಿಭಾಗದ ರೌಡಿಗಳು ಹೇಳೋದೇನು?

ಅರುಣ್​ ಕುಮಾರ್​ ಬೆಳ್ಳಿ

Updated on: May 27, 2025 | 7:50 PM

ಕಳೆದ 8 ವರ್ಷಗಳ ಅವಧಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರದವರಿಗೆ ರೌಡಿಶೀಟರ್ ಹೆಸರಿಂದ ಮುಕ್ತ ಮಾಡಲಾಗುವುದಂತೆ. ತುಮಕೂರು ಜಿಲ್ಲೆಯ ತುಮಕೂರು, ಕುಣಿಗಲ್, ತಿಪಟೂರು, ಮಧುಗಿರಿ ಮತ್ತು ಶಿರಾ ವಿಭಾಗದ ರೌಡಿಶೀಟರ್​ಗಳನ್ನು ತುಮಕೂರು ಎಸ್​ಪಿ ಕಚೇರಿಯ ಡಿಅರ್ ಮೈದಾನಕ್ಕೆ ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಒಬ್ಬೊಬ್ಬ ರೌಡಿಯದು ಒಂದೊಂದು ಕತೆ.

ತುಮಕೂರು, ಮೇ 27: ಸುಮಾರು ವರ್ಷಗಳಿಂದ ಪೊಲೀಸ್ ದಾಖಲೆಗಳಲ್ಲಿ (police records) ಮತ್ತು ಸಮಾಜದಲ್ಲಿ ರೌಡಿಶೀಟರ್ ಆಗಿ ಉಲ್ಲೇಖಿಸಲ್ಪಟ್ಟವರಿಗೆ ನಿಮ್ಮನ್ನು ರೌಡಿಶೀಟರ್ ಉಪನಾಮದಿಂದ ಮುಕ್ತಗೊಳಿಸಲಾಗುತ್ತಿದೆ ಅಂತ ಹೇಳಿದಾಗ ಸಹಜವಾಗೇ ಖುಷಿಯಾಗುತ್ತದೆ. ತುಮಕೂರು ಎಸ್ ಪಿ ಶೋಕ್ ವೆಂಕಟ್​ ರೌಡಿಶೀಟರ್​ಗಳ ಪುನರಾವಲೋಕನ ಸಭೆ ಕರೆದು ಜಿಲ್ಲೆಯ ಸುಮಾರು 91 ರೌಡಿಶೀಟರ್ ಗಳ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನವಾಬ್ ಪಾಶಾ ಹೆಸರಿನ ಹಿರಿಯ ವ್ಯಕ್ತಿಯೊಬ್ಬರು ಒಬ್ಬ ರೌಡಿಶೀಟರ್ ಆಗಿ ಕಳೆದ 18 ವರ್ಷಗಳಲ್ಲಿ ಅನುಭವಿಸಿದ ನೋವು, ಯಾತನೆ, ಅರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ದಾವಣಗೆರೆ ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.