ಓಡೇ ಭೈರವೇಶ್ವರನಿಗೆ ಭಕ್ತರಿಂದ ಮದ್ಯದ ನೈವೇದ್ಯ!

Updated on: Jan 19, 2026 | 3:12 PM

ಜಿಲ್ಲೆಯ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು ಓಡೆ ಭೈರವೇಶ್ವರ ದೇವರಿಗೆ ಮದ್ಯ ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹರಕೆ ತೀರಿಸಲು ತರಲಾಗುವ ಈ ನೈವೇದ್ಯವನ್ನು ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ದೇವಸ್ಥಾನದಲ್ಲಿ ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಮದ್ಯ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ.

ತುಮಕೂರು, ಜನವರಿ 19: ಜಿಲ್ಲೆಯ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು ಓಡೆ ಭೈರವೇಶ್ವರ ದೇವರಿಗೆ ಮದ್ಯ ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹರಕೆ ತೀರಿಸಲು ತರಲಾಗುವ ಈ ನೈವೇದ್ಯವನ್ನು ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ದೇವಸ್ಥಾನದಲ್ಲಿ ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಮದ್ಯ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.