Tumkur News: ಒಂದೇ ಕಡೆ ಮೂರು ಚಿರತೆ ಪ್ರತ್ಯಕ್ಷ, ಜನರಲ್ಲಿ ಮನೆ ಮಾಡಿದ ಆತಂಕ
ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗನಕೆರೆ ಬಳಿಯ ರಂಗನಗುಡ್ಡದಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಚಿರತೆಗಳು ಕಾಣಿಸಿಕೊಂಡ ಹಿನ್ನೆಲೆ ಭಯಬೀತರಾಗಿರುವ ಸ್ಥಳೀಯರು.
ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗನಕೆರೆ ಬಳಿಯ ರಂಗನಗುಡ್ಡದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ತಮ್ಮ ಊರಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮನೆಯಿಂದ ಹೊರ ಹೋಗಲು ಸಹ ಜನ ಆತಂಕ ಪಡುತ್ತಿದ್ದಾರೆ. ಆದಷ್ಟು ಬೇಗ ಚಿರತೆಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರ ಒತ್ತಾಯಿಸಿದ್ದಾರೆ. ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.