Tunnel at Peer Ki Gali: ಜಮ್ಮು ಮತ್ತು ಕಾಶ್ಮೀರದ ಮೊಘಲ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಶೋಪಿಯಾನ್ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ

|

Updated on: Apr 21, 2023 | 5:12 PM

ಚಳಿಗಾಲದಲ್ಲಿ ಶೋಪಿಯಾನ್ ಮತ್ತು ಪೂಂಚ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದೇಸಮ ಹಿಮ ಸುರಿಯುವುದರಿಂದ ಶೋಪಿಯಾನ್​ನಿಂದ ಪೂಂಚ್ ತಲುಪಲು ಸುತ್ತುಬಳಸಿ ಮಾರ್ಗದಲ್ಲಿ 450 ಕಿಮೀ ಕ್ರಮಿಸಬೇಕಾಗುತ್ತದೆ.

ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ):  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಜಮ್ಮು ಮತ್ತು ಕಾಶ್ಮೀರದ ಮೊಘಲ್ ರಸ್ತೆಯ ಪೀರ್ ಕೀ ಗಲಿ (Peer Ki Gali) ಎಂಬಲ್ಲಿ ರೂ. 5,000 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ (Tunnel) ನಿರ್ಮಿಸುವ ಬಗ್ಗೆ ಮಾಡಿರುವ ಘೋಷಣೆಯನ್ನು ಶೋಪಿಯಾನ್ ನಿವಾಸಿಗಳು ಸ್ವಾಗತಿಸಿದ್ದಾರೆ. ಸುರಂಗ ಮಾರ್ಗ ನಿರ್ಮಾಣವಾದಲ್ಲಿ ಮೊಘಲ್ ರಸ್ತೆಯು ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರಾಂತ್ಯದ ಪೂಂಚ್ ಮತ್ತು ರಜೌರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ  ಸರ್ವಋತುಗಳಿಗೆ ಯೋಗ್ಯ ರಸ್ತೆಯಾಗಿ ಮಾರ್ಪಡಲಿದೆ. ಈ ಯೋಜನೆ ಸ್ಥಳೀಯ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ನಿರೀಕ್ಷೆ ಶೋಪಿಯಾನ್ ಜನ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Karnataka Assembly Election:ದೇಶಪ್ರೇಮ ಪಾರ್ಟಿ ಅಭ್ಯರ್ಥಿಯಾಗಿ ಕಂಪ್ಲಿ ವಿಧಾನಸಭಾ ಚುನಾಚವಣೆ ಅಖಾಡಕ್ಕಿಳಿದ ಮಂಗಳಮುಖಿ

‘ಯುವಕರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಬಾರದು. ಸುರಂಗ ಮಾರ್ಗ ಯೋಜನೆಯ ಟೆಂಡರ್ ಹೊರಬಿದ್ದರೆ ಎಮ್ ಟೆಕ್, ಬಿಟೆಕ್ ಮತ್ತು ಪಿಹೆಚ್ ಡಿ ವ್ಯಾಸಂಗ ಮಾಡಿರುವ ಶೋಪಿಯಾನ್ ಯುವಕರಿಗೆ ಅಲ್ಲಿ ಕೆಲಸ ಸಿಗುತ್ತದೆ. ಪೂಂಚ್ ಮತ್ತು ರಜೌರಿ ಜಿಲ್ಲೆಗಳ ಯುವಕರು ಸಹ ನೌಕರಿಗಳಿಗಾಗಿ ತವಕಿಸುತ್ತಿದ್ದಾರೆ,’ ಎಂದು ಶೋಪಿಯಾನ್ ನಿವಾಸಿ ಏಜಾಜ್ ಅಹ್ಮದ್ ಹೇಳುತ್ತಾರೆ.

ಚಳಿಗಾಲದಲ್ಲಿ ಶೋಪಿಯಾನ್ ಮತ್ತು ಪೂಂಚ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದೇಸಮ ಹಿಮ ಸುರಿಯುವುದರಿಂದ ಶೋಪಿಯಾನ್​ನಿಂದ ಪೂಂಚ್ ತಲುಪಲು ಸುತ್ತುಬಳಸಿ ಮಾರ್ಗದಲ್ಲಿ 450 ಕಿಮೀ ಕ್ರಮಿಸಬೇಕಾಗುತ್ತದೆ.

‘ನಮಗೆ ಸುರಂಗಮಾರ್ಗದ ಅವಶ್ಯಕತೆಯಿದೆ. ಜಂಜಾರ್ ಮತ್ತು ಛಾತಾಪಾನಿ ನಡುವೆ ಅದನ್ನು ನಿರ್ಮಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಬಹುದು, ಸುರಂಗ ಮಾರ್ಗದ ಕೆಲಸ ಆದಷ್ಟು ಬೇಗ ಅರಂಭಗೊಂಡು ರಸ್ತೆಯು ವರ್ಷದ ಎಲ್ಲಾ ದಿನಗಳಲ್ಲಿ ಸಂಚಾರಕ್ಕೆ ತಯಾರಾದರೆ ಈ ಭಾಗದ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ,’ ಎಂದು ಶೋಪಿಯಾನ್ ನಿವಾಸಿ ಬಶೀರ್ ಅಹ್ಮದ್ ಪರ್ವಾನಾ ಹೇಳುತ್ತಾರೆ.

ಇದನ್ನೂ ಓದಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್​ ವಿರುದ್ಧ ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ಅಂಕಿತಾ ದತ್ತಾರಿಂದ ಕಿರುಕುಳ ಆರೋಪ

ಪ್ರತಿವರ್ಷ ಚಳಿಗಾಲ ಕೊನೆಗೊಂಡ ಬಳಿಕ ಮೊಘಲ್ ರಸ್ತೆಯಲ್ಲಿ ಸಂಚಾರ ಶುರುವಾಗಬೇಕಾದರೆ, ಅದರೆ ಮೇಲೆ ಗುಡ್ಡೆ ಬೀಳುವ ಹಿಮವನ್ನು ಸರಿಸಬೇಕಾಗುತ್ತದೆ. ಸುರಂಗ ಮಾರ್ಗವಾಗ ನಿರ್ಮಾಣವಾದರೆ, ಪ್ರದೇಶದ ಜನರೆಲ್ಲ ನಿರಾಳವಾಗುತ್ತಾರೆ ಅನ್ನೋದರಲ್ಲಿ ಸಂದೇಹವಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ