Study hard says Tabassum; ಹಿಜಾಬ್ ವಿವಾದ ನನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ: ತಬಸ್ಸುಮ್, ಪಿಯು ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ
ಹಿಜಾಬ್ ನಂಥ ಸೂಕ್ಷ್ಮ ವಿಷಯಯದ ಬಗ್ಗೆ ಈ ಕುಟುಂಬ ಮುಕ್ತ ಅಭಿಪ್ರಾಯ ತಳೆದಿದೆ. ದೇಶದ ಕಾನೂನನ್ನು ನಾವು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ತಬಸ್ಸುಮ್ ಮತ್ತು ಆಕೆಯ ತಂದೆ ಹೇಳುತ್ತಾರೆ.
ಬೆಂಗಳೂರು: ರಂಜಾನ್ ಹಬ್ಬದಂದು ಮನೆಯ ಹಿರಿಯರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಈದೀ (ಉಡುಗೊರೆ) ಕೋಡೋದು ವಾಡಿಕೆ. ಆದರೆ ನಿಮಗೆ ವಿಡಿಯೋದಲ್ಲಿ ಕಾಣುತ್ತಿರುವ ಯುವತಿ ತಬಸ್ಸುಮ್ (Tabassum) ತಾನೇ ತಂದೆತಾಯಿಗಳಿಗೆ ಬಹು ದೊಡ್ಡ ಮತ್ತು ಅಮೂಲ್ಯವಾದ ಈದೀ ನೀಡಿದ್ದಾಳೆ. ನಾಗರತ್ನಮ್ಮ ಮೇದ ಕಸ್ತೂರಿರಂಗ ರಾಷ್ಟ್ರೀಯ ವಿದ್ಯಾಲಯ (NMKRV) ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತಬಸ್ಸುಮ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ (first rank) ಪಡೆದಿದ್ದಾಳೆ. ಆಕೆಯ ತಂದೆತಾಯಿ ಮತ್ತು ಕಟುಂಬದ ಎಲ್ಲಾ ಸದಸ್ಯರು ಸಂತಸ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ತಬಸ್ಸುಮ್ ಮತ್ತು ಆಕೆಯ ತಂದೆತಾಯಿಗಳೊಂದಿಗೆ ಮಾತುಕತೆ ನಡೆಸಿದ್ದು ಹಿಜಾಬ್ ನಂಥ (hijab) ಸೂಕ್ಷ್ಮ ವಿಷಯಯದ ಬಗ್ಗೆ ಈ ಕುಟುಂಬ ಮುಕ್ತ ಅಭಿಪ್ರಾಯ ತಳೆದಿದೆ. ದೇಶದ ಕಾನೂನನ್ನು ನಾವು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ತಬಸ್ಸುಮ್ ಮತ್ತು ಆಕೆಯ ತಂದೆ ಹೇಳುತ್ತಾರೆ. ಹಿಜಾಬ್ ವಿವಾದದಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಅಗಲಿಲ್ಲ, ಅದನ್ನು ತನ್ನಿಂದ ಗಾವುದ ದೂರವಿಟ್ಟಿದ್ದೆ ಎಂದು ತಬಸ್ಸುಮ್ ಹೇಳುತ್ತಾಳೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ